ಮಾನವೀಯತೆಗೆ ಸಾಕ್ಷಿ ಎನಿಸುವ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಬರವಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ ರೆಡಿಟ್ನಲ್ಲಿ ಶೇರ್ ಆದ ವಿಡಿಯೋ ಕೂಡ ನೆಟ್ಟಿಗರ ಮೊಗದಲ್ಲಿ ನಗು ತರಿಸಿದೆ.
ಇಡೀ ನಗರ ಸಂಪೂರ್ಣ ಮಂಜಿನಿಂದ ಆವೃತವಾದ ಕಾರಣ ಕೊರಿಯರ್ ನ್ನು ಸರಿಯಾದ ವಿಳಾಸಕ್ಕೆ ತಲುಪಿಸಲು ಹೆಣಗಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಅಪರಿಚಿತನೊಬ್ಬ ಮಂಜಿನಲ್ಲಿ ಬೂಟಿನ ಹೆಜ್ಜೆಯನ್ನ ಮೂಡಿಸಿ ಸರಿಯಾದ ವಿಳಾಸ ತೋರಿದ್ದಾರೆ. ಇದಕ್ಕೆ ಬದಲಾಗಿ ಮಹಿಳೆ ಮಂಜಿನ ಮೇಲೆಯೇ ಧನ್ಯವಾದ ಎಂದು ಬರೆದು ಜೊತೆಗೆ ನಗೆಯಾಡುತ್ತಿರುವ ಎರಡು ಗೊಂಬೆಗಳ ಚಿತ್ರವನ್ನ ಬಿಡಿಸಿದ್ದಾಳೆ.
ಚೀನಾದ ಕೊರೊನಾ ಲಸಿಕೆಗೆ ಅನುಮೋದನೆ ನೀಡಿದೆ ಈ ರಾಷ್ಟ್ರ..!
ರೆಡಿಟ್ನಲ್ಲಿ ಈ ವಿಡಿಯೋ ಶೇರ್ ಮಾಡಿರುವ ಆ ವ್ಯಕ್ತಿ ನಾನು ಹೆಜ್ಜೆ ಗುರುತಿನ ಮೂಲಕ ನನ್ನ ಮನೆಯ ವಿಳಾಸ ನೀಡಿ ಆಕೆಗೆ ಕೊರಿಯರ್ ತಲುಪಿಸಲು ಸಹಾಯ ಮಾಡಿದೆ. ಹಾಗೂ ಆಕೆ ನನಗೆ ಈ ಧನ್ಯವಾದದ ಪತ್ರವನ್ನ ನೀಡಿದ್ದಾಳೆ ಎಂದು ಹೇಳಿದ್ದಾನೆ. ಈ ಫೋಟೋ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ.