ಮುಂಬೈನ ಬೀದಿಗಳಲ್ಲಿ ಹಾಗೂ ಟ್ರಾಫಿಕ್ ಸಿಗ್ನಲ್ಗಳಲ್ಲಿ ಇನ್ಮುಂದೆ ಭಿಕ್ಷುಕರು ನಿಮ್ಮ ಕಣ್ಣಿಗೆ ಕಾಣಸಿಗೋದಿಲ್ಲ. ಏಕೆಂದರೆ ಮುಂಬೈ ಪೊಲೀಸರು ಈ ಸಂಬಂಧ ಮಹತ್ವದ ಕ್ರಮವನ್ನ ಕೈಗೊಂಡಿದ್ದು ರಸ್ತೆ ಬದಿಯಲ್ಲಿ ಕಾಣಸಿಗುವ ಭಿಕ್ಷುಕರನ್ನ ಕರೆದೊಯ್ದು ಚೆಂಬೂರಿನ ಭಿಕ್ಷುಕರ ವಸತಿ ಗೃಹದಲ್ಲಿ ಆಶ್ರಯ ಕಲ್ಪಿಸಿದ್ದಾರೆ.
ಕೇಂದ್ರ ಬಜೆಟ್ನಿಂದ ಆತ್ಮನಿರ್ಭರ್ ಭಾರತ್ ನಿರ್ಮಾಣ: ನಿರ್ಮಲಾ ಸೀತಾರಾಮನ್
ಮುಂಬೈನ ಜಂಟಿ ಪೊಲೀಸ್ ಆಯುಕ್ತ ವಿಶ್ವಸ್ ಸಂಗರೆ ಪಾಟೀಲ್ ಮುಂಬೈ ನಗರವನ್ನ ಭಿಕ್ಷಾಟನೆ ಮುಕ್ತ ನಗರ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಮುಂಬೈನ ಎಲ್ಲಾ ಪೊಲೀಸ್ ಠಾಣೆಗಳಿಗೆ ಪತ್ರವನ್ನೂ ಬರೆದಿದ್ದಾರೆ. ಪೊಲೀಸರ ಕಣ್ಣಿಗೆ ಕಂಡ ಭಿಕ್ಷುಕರನ್ನ ಹಿಡಿದು ಕೊರೊನಾ ಪರೀಕ್ಷೆ ನಡೆಸಿ ಬಳಿಕ ವಸತಿ ಗೃಹಕ್ಕೆ ಸೇರಿಸಲಾಗುತ್ತೆ.
ಈಗಾಗಲೇ ಮುಂಬೈನ ಆಜಾದ್ ಮೈದಾನದ ಪೊಲೀಸ್ ಠಾಣೆಯಿಂದ 14 ಭಿಕ್ಷುಕರನ್ನ ಬಂಧಿಸಲಾಗಿದ್ದು ಭೋವಾಡಾ ಕೋರ್ಟ್ಗೆ ಹಾಜರುಪಡಿಸಲಾಗಿದೆ.