ಪಾಕಿಸ್ತಾನದಲ್ಲಿ ವಿಶಿಷ್ಟ ಪ್ರೇಮ ಕಥೆಯೊಂದು ಚರ್ಚೆಯಲ್ಲಿದೆ. 80 ವರ್ಷದ ಅಥರ್ ಖಾನ್ ನಾಯಕನಾದ್ರೆ 75 ವರ್ಷದ ನಜೀರನ್ ಬೀಬಿ ಈ ಕಥೆಗೆ ನಾಯಕಿ. ಕೆಲ ದಿನಗಳ ಹಿಂದೆ ಇಬ್ಬರು ಮದುವೆ ಮಾಡಿಕೊಂಡಿದ್ದಾರೆ. ಬಾಲ್ಯದಲ್ಲಿಯೇ ಪ್ರೀತಿಗೆ ಬಿದ್ದಿದ್ದ ಇಬ್ಬರು ಮದುವೆಯಾಗಿರಲಿಲ್ಲ. ಈಗ ಅವರಿಗೆ ಒಟ್ಟಾಗಿ ಜೀವಿಸಲು ಮತ್ತೊಂದು ಅವಕಾಶ ಸಿಕ್ಕಿದೆ.
ಪಂಜಾಬ್ ಪ್ರಾಂತ್ಯದ ಕಸೂರ್ ಪಟ್ಟಣದಲ್ಲಿ ಘಟನೆ ನಡೆದಿದೆ. ಅಥರ್ ಖಾನ್ ಹಾಗೂ ನಜೀರನ್ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಮನೆಯವರು ಪ್ರೀತಿಗೆ ವಿರುದ್ಧವಾಗಿದ್ದರು. ಹಾಗಾಗಿ ಆಗ ಮದುವೆಯಾಗಿರಲಿಲ್ಲ. ಇಬ್ಬರಿಗೂ ದೂರವಿರುವುದು ಸುಲಭವಾಗಿರಲಿಲ್ಲ.
ಮಾಜಿ ಪ್ರೇಮಿ ಮೇಲೆ ಟೀ ಎರಚಲು ಆನ್ಲೈನ್ ಆರ್ಡರ್ ಮಾಡಿದ ಯುವತಿ
ಮನೆಯವರ ಒತ್ತಾಯಕ್ಕೆ ಅಥರ್ ಖಾನ್ ಮದುವೆಯಾಗಿದ್ದ. ಆತನಿಗೆ ನಾಲ್ಕು ಮಕ್ಕಳು. ನಾಲ್ಕು ವರ್ಷಗಳ ಹಿಂದೆ ಮೊದಲ ಪತ್ನಿ ಸಾವನ್ನಪ್ಪಿದ್ದಾಳೆ. ನಂತ್ರ ಅಥರ್ ಖಾನ್ ಒಂಟಿಯಾದ. ನಜೀರನ್ ಸ್ಥಿತಿ ಕೂಡ ಇದೇ ಆಗಿತ್ತು. 9 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿರುವ ನಜೀರನ್ ಗೆ 6 ಮಕ್ಕಳು. ಎಲ್ಲ ಮಕ್ಕಳಿಗೂ ಮದುವೆಯಾಗಿದೆ.
ಮಕ್ಕಳೆಲ್ಲ ದೂರವಾದ್ಮೇಲೆ ಒಂಟಿಯಾಗಿದ್ದವರು ಮತ್ತೆ ಒಂದಾಗಿದ್ದಾರೆ. ಕೆಲ ಸಂಬಂಧಿಕರು ಹಾಗೂ ಸ್ನೇಹಿತರು ಇವ್ರ ಮದುವೆಗೆ ಸಾಕ್ಷಿಯಾದ್ರು.