ಬ್ರಿಟಿಷ್ ಮೆಡಿಕಲ್ ಜರ್ನಲ್ ನಡೆಸಿದ ಅಧ್ಯಯನದ ಪ್ರಕಾರ ರಕ್ತವನ್ನ ತೆಳು ಮಾಡುವ ಔಷಧಿಗಳು ಕೊರೊನಾ ರೋಗಿಗಳು ಸಾವನ್ನಪ್ಪುವ ಪ್ರಮಾಣವನ್ನ ಕಡಿಮೆ ಮಾಡಿದೆ ಎಂದು ಹೇಳಿದೆ.
ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿ ರಕ್ತ ತೆಳುವಾಗುವ ಔಷಧಿಗಳನ್ನ ಪಡೆದ ರೋಗಿಗಳು ಸಾವನ್ನಪ್ಪಿದ ಸಂಖ್ಯೆ ಸಾಮಾನ್ಯ ಕೊರೊನಾ ರೋಗಿಗಳ ಸಂಖ್ಯೆಗಿಂತ ತುಂಬಾನೇ ಕಡಿಮೆ ಇದೆ ಎಂದು ಅಧ್ಯಯನದಲ್ಲಿ ಪುರಾವೆ ದೊರಕಿದೆ.
ದೇಹದ ಪ್ರಮುಖ ನರಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಕೆಲವರು ಕೊರೊನಾ ರೋಗಿಗಳು ಸಾವನ್ನಪ್ಪುತ್ತಾರೆ. ಹೀಗಾಗಿ ಈ ಔಷಧಿಗಳು ರಕ್ತ ಹೆಪ್ಪುಗಟ್ಟೋದನ್ನ ಕಡಿಮೆ ಮಾಡುತ್ತದೆ. ಇದರಿಂದಾಗಿ ಕೊರೊನಾ ರೋಗಿಗಳು ಸಾವನ್ನಪ್ಪುವ ಪ್ರಮಾಣ ಕಡಿಮೆಯಾಗುತ್ತೆ ಎನ್ನಲಾಗಿದೆ.