ಕೊಕೊ ಪೌಡರ್ ಅನ್ನು ಚಾಕೋಲೇಟ್, ಐಸ್ ಕ್ರೀಂ ತಯಾರಿಕೆಯಲ್ಲಿ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಕೂದಲಿನ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಹಾಗಾಗಿ ಕೊಕೊ ಪೌಡರ್ ಬಳಸಿ ಈ ಹೇರ್ ಪ್ಯಾಕ್ ತಯಾರಿಸಿ ಹಚ್ಚಿ.
*ಒಣ ಕೂದಲಿನ ಸಮಸ್ಯೆಯನ್ನು ನಿವಾರಿಸಲು 1 ಕಪ್ ಮೊಸರಿಗೆ ¼ ಕಪ್ ಕೊಕೊ ಪೌಡರ್, 3 ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ 15 ನಿಮಿಷಗಳ ಕಾಲ ಹಾಗೇ ಬಿಟ್ಟು ಸ್ನಾನ ಮಾಡುವ ಮುನ್ನ ಈ ಹೇರ್ ಪ್ಯಾಕ್ ನ್ನು ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೆ 2 ಬಾರಿ ಬಳಸಿ.
ಉದ್ದವಾದ ಮತ್ತು ದಪ್ಪವಾದ ಕೂದಲು ನಿಮ್ಮದಾಗಬೇಕೆ…..?
*ಹೊಳೆಯುವ ಕೂದಲನ್ನು ಪಡೆಯಲು 2 ಚಮಚ ಕೊಕೊ ಪೌಡರ್ ಗೆ 2 ಚಮಚ ಆಲಿವ್ ಆಯಿಲ್. 2 ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಸುಮಾರು ಒಂದು ಗಂಟೆ ಬಿಟ್ಟು ಕೂದಲನ್ನು ವಾಶ್ ಮಾಡಿ.