ಕಾರ್ ತಯಾರಿಕೆಗೆ ಬಳಸುವ ಎಲೆಕ್ಟ್ರಾನಿಕ್ ಉತ್ಪನ್ನಗಳ ಪೂರೈಕೆಯಲ್ಲಿ ಕೊರತೆ ಕಂಡುಬಂದಿದೆ. ಇದರ ಪರಿಣಾಮ ಕಾರ್ ಗಳ ಉತ್ಪಾದನೆ ಮೇಲೆ ಉಂಟಾಗಿದ್ದು, ಹೊಸ ಕಾರು ಖರೀದಿಸುವ ನಿರೀಕ್ಷೆಯಲ್ಲಿ ಇದ್ದವರು ಕಾಯುವಂತಾಗಿದೆ.
ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯಿಂದಾಗಿ ಕಾರ್ ಗಳ ತಯಾರಿಕೆ ಸ್ಥಗಿತಗೊಂಡಿದೆ. ಸುಮಾರು 5 ಲಕ್ಷ ಕಾರ್ ಡೆಲಿವರಿಗೆ ಬಾಕಿ ಉಳಿದಿವೆ. ರಾಜ್ಯದಲ್ಲಿಯೇ ಸುಮಾರು 18 ಸಾವಿರ ಬುಕ್ಕಿಂಗ್ ಮಾಡಿದ ಕಾರ್ ಗಳು ಡೆಲಿವರಿಗೆ ಬಾಕಿ ಇದೆ ಎಂದು ಹೇಳಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ನಂತರದಲ್ಲಿ ಪರಿಸ್ಥಿತಿ ಸುಧಾರಿಸಿ ಗ್ರಾಹಕರು ಹೊಸ ಕಾರ್ ಖರೀದಿಸಲು ಬುಕ್ ಮಾಡಿದ್ದಾರೆ. ಆದರೆ, ಬುಕಿಂಗ್ ಮಾಡಿದವರಿಗೆ ಸಕಾಲದಲ್ಲಿ ಕಾರ್ ತಲುಪಿಸಲು ಸಾಧ್ಯವಾಗುತ್ತಿಲ್ಲ. ಎಲೆಕ್ಟ್ರಾನಿಕ್ ಚಿಪ್ ಮತ್ತು ಸರ್ಕಿಟ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬಹುತೇಕ ವಸ್ತುಗಳನ್ನು ಚೀನಾ, ಡೆನ್ಮಾರ್ಕ್, ತೈವಾನ್ ಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಟಾಪ್ ಮಾಡೆಲ್ ಕಾರ್ ಗಳಲ್ಲಿ ಬಹುತೇಕ ಪ್ರೋಗ್ರಾಂಗಳು ಸರ್ಕಿಟ್ ಮತ್ತು ಎಲೆಕ್ಟ್ರಾನಿಕ್ ಚಿಪ್ ಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಈ ಬಿಡಿಭಾಗಗಳ ಕೊರತೆಯಿಂದಾಗಿ ಕಾರ್ ಗಳ ಉತ್ಪಾದನೆ ಸ್ಥಗಿತವಾಗಿದೆ.