alex Certify ಭಾವುಕರನ್ನಾಗಿಸುತ್ತೆ ʼವರ್ಕ್​ ಫ್ರಂ ಹೋಂʼನಲ್ಲಿದ್ದ ಅಮ್ಮನಿಗೆ ಮಗು ಬರೆದ ಮುದ್ದಾದ ಪತ್ರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವುಕರನ್ನಾಗಿಸುತ್ತೆ ʼವರ್ಕ್​ ಫ್ರಂ ಹೋಂʼನಲ್ಲಿದ್ದ ಅಮ್ಮನಿಗೆ ಮಗು ಬರೆದ ಮುದ್ದಾದ ಪತ್ರ..!

ವರ್ಕಿಂಗ್​ ಫ್ರಂ​ ಹೋಂ ಎಂಬ ವಿಧಾನ ಎಲ್ಲರಿಗೂ ಸುಲಭದ ಕೆಲಸವಲ್ಲ. ಅದರಲ್ಲೂ ನೀವು ಪುಟ್ಟ ಮಕ್ಕಳ ಪೋಷಕರಾಗಿದ್ದರಂತೂ ಮನೆಯ ಕೆಲಸವನ್ನೂ ಮಾಡುತ್ತಾ, ಮಕ್ಕಳ ಪೋಷಣೆಯನ್ನೂ ಮಾಡುತ್ತಾ ಆಫೀಸ್​ ಕೆಲಸವನ್ನೂ ಸರಿದೂಗಿಸಿಕೊಂಡು ಹೋಗಬೇಕಾಗುತ್ತೆ.

ಇದೇ ರೀತಿ ಸದಾ ವರ್ಕ್​ ಫ್ರಂ ಹೋಂನಲ್ಲೇ ಬ್ಯುಸಿಯಾಗಿದ್ದ ತಾಯಿಗಾಗಿ ಪುಟ್ಟ ಮಗುವೊಂದು ಚಿತ್ರವೊಂದನ್ನ ಬಿಡಿಸಿಕೊಟ್ಟಿದ್ದು ಇದನ್ನ ನೋಡಿದ ಆ ತಾಯಿ ಭಾವುಕರಾಗಿದ್ದಾರೆ.

ಫ್ಲೆಕ್ಸೆಬಲ್​ ಕಂಪನಿ ಸಿಇಒ ಪ್ರಿಯಾ ಅಮಿನ್​ ಎಂಬವರು ಈ ಫೊಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಇವರ 6 ವರ್ಷದ ಮಗ ಈ ಚಿತ್ರವನ್ನ ಬಿಡಿಸಿದ್ದಾನೆ.

ಈ ಚಿತ್ರದಲ್ಲಿ ಒಂದು ಕಡೆ ತಾಯಿ ಕಂಪ್ಯೂಟರ್​ ಮುಂದೆ ಕುಳಿತಿದ್ದರೆ ಇನ್ನೊಂದು ಕಡೆ ಮಗು ಅಮ್ಮಾ ನಿನ್ನ ಕೆಲಸ ಮುಗೀತೆ ಎಂದು ಕೇಳುತ್ತಾನೆ. ಅದಕ್ಕೆ ತಾಯಿ ಇಲ್ಲ ಎಂದು ಉತ್ತರಿಸಿದ ರೀತಿಯಲ್ಲಿ ಚಿತ್ರವನ್ನ ಬಿಡಿಸಿದ್ದಾನೆ ಪುಟ್ಟ ಬಾಲಕ.

ಕೆಲ ದಿನಗಳ ಹಿಂದಷ್ಟೇ ನಾನು ಆಫೀಸಿನ ಕೆಲಸದಲ್ಲಿ ಬ್ಯುಸಿಯಾಗಿದ್ದ ವೇಳೆ ನನ್ನ ಮಗ ಬಂದು ಈ ಹಾಳೆಯನ್ನ ನನ್ನ ಕೈಮೇಲೆ ಇಟ್ಟಿದ್ದ. ನಾನು ಈ ಚಿತ್ರವನ್ನ ನೋಡಿ ಚೆನ್ನಾಗಿದೆ ಎಂದು ಹೇಳಿದೆ. ಬಳಿಕ ಈ ಚಿತ್ರವನ್ನ ಸೂಕ್ಷ್ಮವಾಗಿ ಗಮನಿಸಿದ ನನಗೆ ಆತ ಬರೆದಿದ್ದ ನಾಲ್ಕು ಶಬ್ದಗಳು ಕಾಣಿಸಿತು. ಹಾಗೂ ಅದು ನನ್ನನ್ನ ಭಾವುಕಳನ್ನಾಗುವಂತೆ ಮಾಡಿತು ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...