ಸಿಗರೇಟು ಸೇದುವ ಚಟ ಇರುವವರು ಬಹುಬೇಗ ಕೊರೊನಾ ಸೋಂಕಿಗೆ ಒಳಗಾಗುತ್ತಾರೆ ಎಂಬುದನ್ನು ಸಂಶೋಧನೆಯೊಂದು ದೃಢಪಡಿಸಿದೆ. ಅದು ಹೇಗೆ ಎಂದಿರಾ…?
ಹೆಚ್ಚು ಸಿಗರೇಟು ಸೇದುವುದರಿಂದ ದೇಹದ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದು ಸೋಂಕುಗಳಿಗೆ ದೇಹ ಪ್ರವೇಶಿಸಲು ನೆರವು ಮಾಡುತ್ತದೆ. ಉಸಿರಾಟದ ಸೋಂಕಿನ ಅಪಾಯ ಇದರಿಂದ ಬಹುಬೇಗ ಹೆಚ್ಚುತ್ತದೆ. ಮಾತ್ರವಲ್ಲ ರಕ್ತದೊತ್ತಡ ಹಾಗೂ ಹೃದಯಾಘಾತದಂಥ ಸಮಸ್ಯೆಗಳಿಗೂ ಕಾರಣವಾದೀತು.
ಹಾರ್ಮೋನ್ ಸಮತೋಲನಕ್ಕಾಗಿ ಈ ʼಆಹಾರʼ ಸೇವಿಸಿ
ಸ್ಮೋಕಿಂಗ್, ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ. ಅತಿಯಾದ ಧೂಮಪಾನದಿಂದ ಅಲ್ಲಲ್ಲಿ ರಂಧ್ರಗಳು ಮೂಡುತ್ತವೆ. ಕ್ರಮೇಣ ಇದು ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನೇ ಕಳೆದುಕೊಂಡು ಬಿಡುತ್ತದೆ. ಇಡೀ ದೇಹದ ನಾಳಗಳೆಲ್ಲಾ ದುರ್ಬಲವಾಗಿ ಶ್ವಾಸಕೋಶದ ಕಾರ್ಯವೈಖರಿ ದುರ್ಬಲಗೊಳ್ಳುತ್ತದೆ.
ಸಿಗರೇಟ್ ಸೇವನೆಯೂ ಕೊರೋನಾ ವೈರಸ್ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ.