ಅಂಗವಿಕಲತೆಯನ್ನು ಮೆಟ್ಟಿ ನಿಂತು ಅದ್ಬುತ ನೃತ್ಯ ಪ್ರದರ್ಶಿಸಿದ ನರ್ತಕಿ 12-02-2021 9:58PM IST / No Comments / Posted In: Latest News, International ಸಾಧಿಸಬೇಕು ಎನ್ನುವ ಛಲವೊಂದಿದ್ದರೆ ಸಾಕು ಎಂತಹ ಕಠಿಣ ಸವಾಲನ್ನೂ ಎದುರಿಸಬಹುದು. ಈ ಮಾತಿಗೆ ಸಾಕ್ಷಿಯಾಗಿದ್ದಾರೆ ನರ್ತಕಿ ವಿಕ್ಟೋರಿಯಾ ಬ್ಯೇನೋ. ಬ್ರೆಜಿಲ್ನ 16 ವರ್ಷ ವಯಸ್ಸಿನ ವಿಕ್ಟೋರಿಯಾ ಹುಟ್ಟು ಅಂಗವಿಕಲೆ. ಎರಡೂ ಕೈಗಳು ಇಲ್ಲದೇ ಇದ್ದರೂ ಸಹ ಈಕೆ ನೃತ್ಯ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಮನಃಶಾಸ್ತ್ರಜ್ಞರೊಬ್ಬರು ನೀಡಿದ ಸಲಹೆ ಮೇರೆಗೆ ವಿಕ್ಟೋರಿಯಾ ಬಹಳ ಚಿಕ್ಕ ವಯಸ್ಸಿನಲ್ಲೇ ನೃತ್ಯ ತರಬೇತಿ ಪಡೆದಿದ್ದಾರೆ. ವಿಕ್ಟೋರಿಯಾ ತನ್ನ ಪಟ್ಟಣದಲ್ಲೇ ಬ್ಯಾಲೆಟ್ ನೃತ್ಯವನ್ನ ಆರಂಭಿಸಿದ್ರು. ಅಂಗವಿಕಲೆ ಈ ಕ್ಷೇತ್ರದಲ್ಲಿ ಎಂತಹ ಸಾಧನೆ ಮಾಡ್ತಾಳೆ ಎಂದು ಅನುಮಾನ ಪಟ್ಟವರೇ ಅನೇಕರು. ಆದರೆ ಇದೀಗ ಈಕೆ ಬ್ಯಾಲೆಟ್ ನೃತ್ಯವನ್ನ ಕರಗತ ಮಾಡಿಕೊಂಡಿದ್ದು ಈಕೆಯ ನೃತ್ಯವನ್ನ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಇನ್ನು ತನ್ನ ಸಾಧನೆಯ ಬಗ್ಗೆ ಮಾತನಾಡಿದ ವಿಕ್ಟೋರಿಯಾ ನಿಮ್ಮ ಕನಸನ್ನ ಬೇಟೆಯಾಡಲು ನಿರ್ಧರಿಸಿದ ಮೇಲೆ ನಿಮ್ಮಲ್ಲಿರುವ ಕುಂದು ಕೊರತೆಗಳು ನಿಮ್ಮನ್ನ ತಡೆಯುವಂತೆ ಅವಕಾಶ ನೀಡಬೇಡಿ ಎಂದು ಹೇಳಿದ್ದಾರೆ. 'For me, arms, they’re just a detail,' says Brazilian ballerina Vitória Bueno who was born without arms but with a gift for dance https://t.co/oBRvhKISPh pic.twitter.com/Z2Y10ew4MR — Reuters (@Reuters) February 12, 2021 .