ಫಿಲಿಫೈನ್ಸ್ನಲ್ಲಿ ನಾಯಿಯೊಂದು 1 ಕಣ್ಣು , 2 ನಾಲಗೆ ಹಾಗೂ ಮೂಗೇ ಇಲ್ಲದ ಮರಿಗೆ ಜನ್ಮ ನೀಡಿದ್ದು ಈ ವಿಚಿತ್ರ ನಾಯಿ ಮರಿ ಕಂಡ ಮಾಲೀಕ ಶಾಕ್ ಆಗಿದ್ದಾರೆ. ಫಿಲಿಪೈನ್ಸ್ ಅಕ್ಲಾನ್ ಪ್ರಾಂತ್ಯದ ಅಮಿ ಡಿ ಮಾರ್ಟಿನ್ ಎಂಬವರು ಸಾಕಿದ ಹೆಣ್ಣು ನಾಯಿ ಎರಡು ಮರಿಗಳಿಗೆ ಜನ್ಮ ನೀಡಿದೆ. ಇದರಲ್ಲಿ ಒಂದು ಮರಿ ಸಾಮಾನ್ಯವಾಗಿದ್ದರೆ ಇನ್ನೊಂದು ಮರಿ ಈ ರೀತಿ ಒಕ್ಕಣ್ಣು ಹೊಂದಿದೆ.
ಫೆಬ್ರವರಿ 6ನೇ ತಾರೀಖಿನಂದು ಈ ವಿಚಿತ್ರ ನಾಯಿ ಮರಿಯ ಜನನವಾಗಿದೆ. ತೆಳುವಾದ ಚರ್ಮ ಹೊಂದಿದ್ದ ಈ ನಾಯಿ ಮೂಗೇ ಇಲ್ಲದ ಕಾರಣ ಉಸಿರಾಡಲು ಹೆಣಗಾಡುತ್ತಿತ್ತು. ಬಾಯಿಯಲ್ಲಿ ದೊಡ್ಡದಾದ 2 ನಾಲಗೆ ಇದ್ದವು. ಮರಿ ಒಂದೇ ಕಣ್ಣನ್ನ ಹೊಂದಿದ್ದರೆ. ಮೂಗು ಇರಬೇಕಾದ ಜಾಗ ಖಾಲಿಯಾಗಿತ್ತು.
ಮೆದುಳಿಗೆ ಕೆಲಸ ನೀಡುತ್ತೆ ಈಗ ತಲೆ ಎತ್ತಿರೋ ಹೊಸ ವಸ್ತು ಸಂಗ್ರಹಾಲಯ..!
ಆದರೆ ಈ ನಾಯಿಮರಿಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗದ ಕಾರಣ ರಾತ್ರಿ 10 ಗಂಟೆ ಸುಮಾರಿಗೆ ಸಾವನ್ನಪ್ಪಿದೆ. ಬಹುಶಃ ತಾಯಿ ನಾಯಿ ಗರ್ಭಿಣಿಯಾಗಿದ್ದ ವೇಳೆ ವಿಷ ಪದಾರ್ಥವನ್ನ ಸೇವಿಸಿದ್ದಿರಬಹುದು. ಹೀಗಾಗಿ ಈ ರೀತಿ ಆಗಿದೆ ಎಂದು ಪಶು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲವೇ ಜೀನ್ಸ್ ಕೊರತೆಯಿಂದ ಈ ರೀತಿ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.