ಸ್ಟ್ರಾಬೆರ್ರಿ ಉತ್ಸವದ ಬಳಿಕ ಉತ್ತರ ಪ್ರದೇಶ ಇದೀಗ ಅಸಾಂಪ್ರದಾಯಕ ತಳಿಗಳ ಹಣ್ಣು ಹಾಗೂ ತರಕಾರಿಗಳ ಮೇಲೆ ಕೇಂದ್ರೀಕರಿಸುವ ಇನ್ನಷ್ಟು ಉತ್ಸವಕ್ಕೆ ಮುಂದಾಗಿದೆ. ಇದೇ ಪ್ರಯತ್ನದ ಮುಂದಿನ ಭಾಗವಾಗಿ ಶೀಘ್ರದಲ್ಲೇ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಗೆಣಸಿನ ಹಬ್ಬವನ್ನ ನಡೆಸಲಿದೆ. ಇದು ಮಾತ್ರವಲ್ಲದೇ ಉತ್ತರ ಪ್ರದೇಶ ಸಿಎಂ ಡ್ರ್ಯಾಗನ್ ಫ್ರೂಟ್ಗಳ ಉತ್ಸವವನ್ನ ನಡೆಸಿ ಅದರ ಪ್ರಯೋಜನ ಹಾಗೂ ಔಷಧೀಯ ಮೌಲ್ಯಗಳನ್ನ ಜನರಿಗೆ ಮನವರಿಕೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಡ್ರ್ಯಾಗನ್ ಫ್ರೂಟ್ಗಳಲ್ಲಿ ಕ್ಯಾಲ್ಸಿಯಂ, ಫೈಬರ್, ಮ್ಯಾಗ್ನೀಷಿಯಂ, ಕಬ್ಬಿಣಾಂಶ ಹಾಗೂ ವಿಟಾಮಿನ್ ಎ, ಸಿ ಅಗಾಧ ಪ್ರಮಾಣದಲ್ಲಿದೆ. ದೇಹದಲ್ಲಿ ಸಕ್ಕರೆ ಅಂಶವನ್ನ ಹತೋಟಿಯಲ್ಲಿ ಇಡೋಕೆ ಈ ಹಣ್ಣು ಸಹಕಾರಿ.
ಅರಳಿ ಮರದ ತೊಗಟೆಯಿಂದ ಈ ಆರೋಗ್ಯ ಸಮಸ್ಯೆ ನಿವಾರಿಸಿಕೊಳ್ಳಿ
ಇತ್ತ ಪ್ರಯಾಗ್ ರಾಜ್ನಲ್ಲಿ ಯೋಗಿ ಸರ್ಕಾರ ಪೇರಳೆ ಹಣ್ಣಿನ ಉತ್ಸವಕ್ಕೆ ಪ್ಲಾನ್ ಮಾಡಿದ್ದರೆ ಕುಷಿ ನಗರದಲ್ಲಿ ಬಾಳೆಹಣ್ಣಿನ ಉತ್ಸವ ಹಾಗೂ ಪ್ರತಾಬ್ಗರ್ನಲ್ಲಿ ನೆಲ್ಲಿಕಾಯಿ ಉತ್ಸವಕ್ಕೆ ಪ್ಲಾನ್ ಮಾಡಿದೆ.
ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಯೋಜನೆಯ ಅಡಿಯಲ್ಲಿ ಉತ್ತರ ಪ್ರದೇಶ ಸರ್ಕಾರ ವಿವಿಧ ಬೆಳೆಗಳಿಗೆ ಉತ್ಸವವನ್ನ ಏರ್ಪಡಿಸುವ ಮೂಲಕ ಪ್ರಾಯೋಜಕತ್ವ ನೀಡಲು ಮುಂದಾಗಿದೆ. ಕೆಲ ದಿನಗಳ ಹಿಂದಷ್ಟೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸ್ಟ್ರಾಬೆರ್ರಿ, ಡ್ರ್ಯಾಗನ್ ಫ್ರೂಟ್ ಹಾಗೂ ಗೆಣಸಿನ ಮಹತ್ವದ ಬಗ್ಗೆ ತಿಳಿಸಿದ್ದರು.