ಜೀವನ ಪ್ರಮಾಣ ಪತ್ರ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಫೆಬ್ರವರಿ 28ಕ್ಕೆ ವಿಸ್ತರಿಸಿದ್ದು, ಆ ದಿನವೂ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿದಾರರಿಗೆ ಹೆಚ್ಚು ಸಮಯವೇ ಉಳಿದಿಲ್ಲ.
ಆದರೆ ಪಿಂಚಣಿದಾರರಿಗೆ ನೆಮ್ಮದಿ ಕೊಡುವ ನಡೆಯೊಂದರಲ್ಲಿ, ಜೀವನ ಪ್ರಮಾಣ ಪತ್ರವನ್ನು (ಡಿಎಲ್ಸಿ) ಡಿಜಿಟಲ್ ಆಗಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಇಪಿಎಫ್ಓ. ಆಧಾರ್ ಚಾಲಿತ ಬಯೋಮೆಟ್ರಿಕ್ ಅಥೆಂಟಿಕೇಶನ್ ಮೂಲಕ ಡಿಎಲ್ಸಿ ಜನರೇಟ್ ಮಾಡಬಹುದಾಗಿದೆ.
ಬಯೋಮೆಟ್ರಿಕ್ ಆಧರಿತ ಡಿಜಿಟಲ್ ಸೇವೆಯಾದ ಡಿಎಲ್ಸಿ ಬಳಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರೀ ನೌಕರರು ಇಪಿಎಫ್ಓ ಏಜೆನ್ಸಿಯ ಸೇವೆಗಳನ್ನು ಬಳಸಿಕೊಳ್ಳಬಹುದಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: ‘hi’ ಎಂದು ವಾಟ್ಸಾಪ್ ಮಾಡಿದರೆ ಸಾಕು ಲಭ್ಯವಾಗುತ್ತೆ ಉದ್ಯೋಗದ ಮಾಹಿತಿ
ಇದೀಗ ಭಾರತೀಯ ಅಂಚೆಯ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಸಹ ಪಿಂಚಣಿದಾರರ ಮನೆಬಾಗಿಲುಗಳಿಗೆ ಡಿಎಲ್ಸಿ ಒದಗಿಲು ಮುಂದಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ಡಿಎಲ್ಸಿಯನ್ನು ಐಪಿಪಿಬಿ ಹಾಗೂ ಐಪಿಪಿಬಿಯೇತರ ಗ್ರಾಹಕರಿಗೆ ಡಿಎಲ್ಸಿ ಸೇವೆಗಳನ್ನು ಕೊಡಮಾಡಲಿದೆ ಭಾರತೀಯ ಅಂಚೆ.
http://ccc.cept.gov.in/covid/request.aspx ಜಾಲತಾಣಕ್ಕೆ ಭೇಟಿ ಕೊಟ್ಟು ಮನೆಬಾಗಿಲಿಗೆ ಡಿಎಲ್ಸಿ ಒದಗಿಸಲು ಮನವಿ ಮುಂದಿಡಬಹುದಾಗಿದೆ.