ಬಿಡುವಿಲ್ಲದ ತಮ್ಮ ಕರ್ತವ್ಯದ ನಡುವೆ ಪೊಲೀಸರಿಗೆ ತಮ್ಮ ಕುಟುಂಬಗಳೊಂದಿಗೆ ಕಾಲ ಕಳೆಯಲು ಸಮಯ ಸಿಗುವುದೇ ಅಪರೂಪ. ಹೀಗಿರುವಾಗ ತೆಲಂಗಾಣದ ಪೊಲೀಸ್ ಅಧಿಕಾರಿಯೊಬ್ಬರು ನಿಸ್ವಾರ್ಥ ಸೇವೆಯ ಸಾಕಾರ ಮೂರ್ತಿಯಾಗಿ ನಿಂತಿದ್ದಾರೆ.
ತೆಲಂಗಾಣದ ಉಟ್ನೂರ್‌ನ ಡಿಎಸ್‌ಪಿ ಎನ್. ಉದಯ್ ರೆಡ್ಡಿ ಕಳೆದ ವರ್ಷ ಅದಿಲಾಬಾದ್ ಜಿಲ್ಲೆಯ ಜಮ್ಡಾ ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಅಲ್ಲಿನ ಬುಡಕಟ್ಟು ಜನಾಂಗದೊಂದಿಗೆ ಮಾತನಾಡಿದ 29 ವರ್ಷದ ಅಧಿಕಾರಿ, ಅಲ್ಲಿನ ಜನರಿಗೆ ಬಾಧಿಸುತ್ತಿದ್ದ ಕಣ್ಣಿನ ಸಮಸ್ಯೆಗಳ ಬಗ್ಗೆ ಅರಿತುಕೊಂಡಿದ್ದಾರೆ. ಈ ವಿಚಾರವಾಗಿ ಏನನ್ನಾದರೂ ಮಾಡಲೇಬೇಕೆಂದು ನಿರ್ಧರಿಸಿದ ರೆಡ್ಡಿ, ಹೊಸ ಅಭಿಯಾನಕ್ಕೆ ಚಾಲನೆ ಕೊಟ್ಟರು.
ಅತಿಥಿ ಉಪನ್ಯಾಸಕನ ಆನ್ಲೈನ್ ಕ್ಲಾಸ್ ವೇಳೆಯಲ್ಲೇ ಸೆಂಡ್ ಆಯ್ತು ಅಶ್ಲೀಲ ಫೋಟೋ
ಕಣ್ಣಿನ ಸಮಸ್ಯೆಯಿಂದ ಹೊರ ಬರಲು ಸಾಕಷ್ಟು ಜನರಿಗೆ ನೆರವಾಗಲು ನಿರ್ಧರಿಸಿದ ರೆಡ್ಡಿ, ಎಲ್.ವಿ. ಪ್ರಸಾದ್ ಕಣ್ಣಿನ ಸಂಸ್ಥೆಯ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು 67 ಮಂದಿಗೆ ಕಣ್ಣಿನ ಸರ್ಜರಿ ಮಾಡಿಸಲು ಯಶಸ್ವಿಯಾಗಿದ್ದಾರೆ. ಇದೇ ಉಟ್ನೂರು ಪ್ರದೇಶದ 300 ಗ್ರಾಮಗಳಲ್ಲಿ 500ಕ್ಕೂ ಅಧಿಕ ವೈದ್ಯಕೀಯ ಕ್ಯಾಂಪ್‌ಗಳನ್ನು ಹಮ್ಮಿಕೊಂಡಿದ್ದಾರೆ ರೆಡ್ಡಿ.