ತನ್ನ ಮಡದಿಯ ಲೈವ್ ಲೊಕೇಶನ್ ತಿಳಿದುಕೊಳ್ಳಲು ಆಕೆಯ ಸ್ಕೂಟಿಗೆ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿದ್ದ ಪತಿರಾಯನೊಬ್ಬನ ಕಥೆ ಇದು.
ಹೈದರಾಬಾದ್ನ ಈ ವ್ಯಕ್ತಿ ತನ್ನ ಗರ್ಲ್ಫ್ರೆಂಡ್ ಜೊತೆಗೆ ಆರಾಮಾಗಿ ಕಾಲ ಕಳೆಯಲು ತನ್ನ ಮಡದಿಯನ್ನು ಟ್ರ್ಯಾಕ್ ಮಾಡುತ್ತಿದ್ದ. ಆದರೆ ಆತನ ಟೈಂ ಚೆನ್ನಾಗಿಲ್ಲ ಎಂದು ಕಾಣುತ್ತದೆ, ಆತನ ಮಡದಿಗೆ ಈ ಟ್ಯ್ಯಾಕಿಂಗ್ ಪ್ಲಾನ್ ಗೊತ್ತಾಗಿಬಿಟ್ಟಿದೆ.
ಇಲ್ಲಿನ ಶ್ರೀನಗರ ಕಾಲೋನಿಯಲ್ಲಿ ವಾಸಿಸುವ 45 ವರ್ಷ ವಯಸ್ಸಿನ ವಿವೇಕ್ ವೀರೇಂದ್ರ ಸಿಂಗ್, 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಶ್ರೀನಗರ ಕಾಲೋನಿಯಲ್ಲಿ ತಮ್ಮ ಮಡದಿಯೊಂದಿಗೆ ವಾಸಿಸುವ ವೀರೇಂದ್ರ ಇತ್ತೀಚಿನ ದಿನಗಳಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಹತ್ತಿರವಾಗಿದ್ದಾರೆ. ಇಬ್ಬರ ನಡುವಿನ ಈ ಅಫೇರ್ ಬಹಳ ಮುಂದುವರೆದು, ತನ್ನನ್ನು ಮದುವೆಯಾಗಲು ವಿವೇಕ್ನ ಗರ್ಲ್ಫ್ರೆಂಡ್ ಆತನ ಮೇಲೆ ಒತ್ತಡ ಹಾಕಲು ಶುರುವಿಟ್ಟುಕೊಂಡಿದ್ದಾಳೆ.
ಟಿಕ್ ಟಾಕ್ ಮಾದರಿಯಲ್ಲೇ theek-thaak ಅಪ್ಲಿಕೇಶನ್ ರೆಡಿ
ಇದಕ್ಕೆ ಪ್ಲಾನ್ ಮಾಡಿದ ವಿವೇಕ್, ತನ್ನ ಮಡದಿಗೆ ವಿಚ್ಛೇದನ ನೀಡಲು ಕೋರ್ಟ್ ಒಂದರಲ್ಲಿ ಅರ್ಜಿ ಹಾಕಿದ್ದಾರೆ. ಈ ನಡೆಯಿಂದ ಶಾಕ್ ಆದ ಆತನ ಮಡದಿ ತನಗೆ ವಿಚ್ಛೇದನ ಪಡೆಯಲು ಇಷ್ಟವಿಲ್ಲವೆಂದಿದ್ದಾಳೆ. ಇದರಿಂದ ಇನ್ನಷ್ಟು ಸಿಟ್ಟುಗೊಂಡ ವಿವೇಕ್, ತನ್ನ ಮಡದಿಗೆ ಕಿರುಕುಳ ಕೊಡಲು ಶುರುವಿಟ್ಟುಕೊಂಡಿದ್ದಾನೆ. ಇದರ ವಿರುದ್ಧ ಆತನ ಪತಿ ಪೊಲೀಸ್ ದೂರು ಕೊಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತನ್ನನ್ನು ಕೆಲವು ಮಂದಿ ಫಾಲೋ ಮಾಡುತ್ತಿದ್ದಾರೆ ಎಂಬ ವಿಷಯ ವಿವೇಕ್ ಮಡದಿಗೆ ಗೊತ್ತಾಗಿದೆ. ಅವರನ್ನೆಲ್ಲಾ ಅನಿರೀಕ್ಷಿತ ಜಾಗಗಳಲ್ಲಿ ವಿವೇಕ್ ಮಡದಿ ನೋಡುತ್ತಿದ್ದರು. ಇದರಿಂದ ಅನುಮಾನಗೊಂಡ ವಿವೇಕ್ ಮಡದಿ ತಮ್ಮ ಸ್ಕೂಟಿಯನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿರುವುದು ಕಂಡು ಬಂದಿದೆ. ತನ್ನ ಪ್ರತಿಯೊಂದು ನಡೆಯನ್ನೂ ಗಮನಿಸಲು ಮುಂದಾಗಿದ್ದ ಪತಿ ವಿರುದ್ಧ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ ವಿವೇಕ್ ಪತ್ನಿ.