ಶಿವಮೊಗ್ಗ ಜಿಲ್ಲೆ ಅಂದ್ರೆ ಸಾಕು ನೆನಪಾಗೋದೇ ದಟ್ಟ ಕಾನನ. ಇದೇ ಜಿಲ್ಲೆಯ ಪ್ರಸಿದ್ಧ ತಾಲೂಕಿನಲ್ಲಿ ಒಂದಾದ ತೀರ್ಥಹಳ್ಳಿ ಕೂಡ ಹಸಿರು ಸಿರಿಯಿಂದ ಕೂಡ ಗಮ್ಯ ಸ್ಥಾನ. ಈ ತಾಲೂಕಿನ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ 9ನೇ ಶತಮಾನದ್ದು ಎನ್ನಲಾದ ಕವಲೇ ದುರ್ಗ ಕೋಟೆ ಕಾಣಸಿಗುತ್ತದೆ. ಇದು ಕೆಳದಿ ಸಂಸ್ಥಾನದ ನಾಲ್ಕನೆಯ ಹಾಗೂ ಕೊನೆಯ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ.
ತೀರ್ಥಹಳ್ಳಿ ನಗರದಿಂದ ಈ ಕೋಟೆ 18 ಕಿಲೋಮೀಟರ್ ಹಾಗೂ ಶಿವಮೊಗ್ಗ ನಗರದಿಂದ 80 ಕಿಲೋಮೀಟರ್ ದೂರದಲ್ಲಿದೆ. ತೀರ್ಥಹಳ್ಳಿ – ಸಾಲೂರು ಮಾರ್ಗದಲ್ಲಿ ಈ ಕವಲೆದುರ್ಗ ನಿಮಗೆ ಕಾಣಸಿಗಲಿದೆ.
ಪ್ರಮುಖ ಪ್ರವಾಸಿ ಸ್ಥಳ ʼವೇಣೂರುʼ
ಸಂಪೂರ್ಣ ಹಸಿರಿನಿಂದಾವೃತ ಈ ಕವಲೆದುರ್ಗದ ಕೋಟೆ ಎಷ್ಟು ಪ್ರಶಾಂತವಾಗಿದೆ ಅಂದರೆ ನಿಮ್ಮ ಹೆಜ್ಜೆ ಸದ್ದು ಕೂಡ ಕೇಳಬಹುದು. ಈ ದುರ್ಗಕ್ಕೆ ಭುವನಗಿರಿ ದುರ್ಗ ಹಾಗೂ ಕೌಲೆ ದುರ್ಗ ಎಂಬ ಹೆಸರು ಕೂಡ ಇತ್ತು.
ಕವಲೆದುರ್ಗದಲ್ಲಿ ಕೋಟೆಯ ಜೊತೆಗೆ ಪ್ರವಾಸಿಗರನ್ನ ಸೆಳೆಯುವ ಮತ್ತೊಂದು ಸ್ಥಳವೆಂದರೆ ತಿಮ್ಮಣ್ಣನಾಯಕನ ಕೆರೆ. ಹದಿನೆಂಟು ಎಕರೆ ವಿಸ್ತೀರ್ಣ ಇರುವ ಈ ಕೆರೆಯನ್ನ ನೋಡೋದೇ ಒಂದು ಅಂದ.
ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾದ ವೀರಶೈವ ಮಠ, ಮಠದ ಮುಖ್ಯದ್ವಾರ ಹಾಗೂ ಮಂಟಪದ ಎಡಭಾಗದಲ್ಲಿರುವ ನಾಗತೀರ್ಥ ಕೊಳ 6 ಅಡಿ ಎತ್ತರದ ಏಳು ಹೆಡೆ ಏಕಶಿಲಾ ನಾಗರಶಿಲ್ಪ ಹೀಗೆ ಗತಕಾಲದ ವೈಭವವನ್ನ ನೀವು ಕಣ್ತುಂಬಿಕೊಳ್ಳಲಾಗಿದೆ.