ಮಂಗಳೂರು: ಖ್ಯಾತ ಪೋಷಕ ನಟಿ ಪದ್ಮಜಾ ರಾವ್ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.
ಮಂಗಳೂರಿನ 5 ನೇ ಜೆಎಂಎಫ್ಸಿ ನ್ಯಾಯಾಲಯ ಚೆಕ್ ಬೌನ್ಸ್ ಪ್ರಕರಣದಲ್ಲಿ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಮಂಗಳೂರಿನ ವೀರೇಂದ್ರ ಶೆಟ್ಟಿ ಅವರ ವೀರೂ ಪ್ರೊಡಕ್ಷನ್ಸ್ ಸಂಸ್ಥೆಗೆ 40 ಲಕ್ಷ ರೂಪಾಯಿ ಕೊಡಬೇಕಿದ್ದ ಪದ್ಮಜಾ ರಾವ್ ಅವರು ಸಾಲದ ಭದ್ರತೆಗಾಗಿ ಚೆಕ್ ನೀಡಿದ್ದರು. ಅವುಗಳು ಬೌನ್ಸ್ ಆದ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಕೋರ್ಟ್ ಮೊರೆ ಹೋಗಿದ್ದಾರೆ.
ಈ ಹಿನ್ನಲೆಯಲ್ಲಿ ಬಂಧನ ವಾರಂಟ್ ಜಾರಿ ಮಾಡಿ ತಲಘಟ್ಟಪುರ ಠಾಣೆ ಪೊಲೀಸರಿಗೆ ರವಾನಿಸಿದ್ದು, ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ತಿಳಿಸಲಾಗಿದೆ ಎಂದು ಹೇಳಲಾಗಿದೆ.