ಮೊದಲಿನಿಂದಲೂ ಕೃಷಿ ಕಾನೂನನ್ನ ವಿರೋಧಿಸುತ್ತಲೇ ಬಂದಿರುವ ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನ ಮತ್ತೊಮ್ಮೆ ಕುಟುಕಿದ್ದಾರೆ. ರೈತರು, ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರು ಮತ್ತು ಮಾರುಕಟ್ಟೆಗಳನ್ನ ನಾಶ ಮಾಡುವ ಮೂಲಕ ನಮ್ಮ ದೇಶದಲ್ಲಿ ನಾವಿಬ್ಬರು ನಮಗಿಬ್ಬರು ಎಂಬಂತೆ ಕೇಂದ್ರ ಸರ್ಕಾರ ಬದುಕುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೃಷಿ ಮಸೂದೆಯನ್ನ ವಿರೋಧಿಸಿ ದೆಹಲಿಯ ವಿವಿಧ ಗಡಿಭಾಗದಲ್ಲಿ ರೈತರು ಸುದೀರ್ಘ ಪ್ರತಿಭಟನೆಯನ್ನ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ಕೃಷಿ ಮಸೂದೆ ಬಗ್ಗೆ ಮಾತನಾಡುವ ವೇಳೆ ಪ್ರತಿಪಕ್ಷದವರು ಕೃಷಿ ಮಸೂದೆಯ ಉದ್ದೇಶಗಳ ಬಗ್ಗೆ ಮಾತನಾಡ್ತಿಲ್ಲ ಎಂದು ಆರೋಪ ಮಾಡಿದ್ದರು. ಆದರೆ ನಾನಿಂದು ಅದರ ಬಗ್ಗೆ ಮಾತನಾಡುತ್ತೇನೆ. ನಾಲ್ವರು ಈ ದೇಶವನ್ನ ನಡೆಸಿಕೊಂಡು ಹೋಗ್ತಿದ್ದಾರೆ. ಆ ನಾಲ್ವರು ಯಾರೆಂಬುದೂ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವೇಳೆ ಕುಟುಂಬ ಕಲ್ಯಾಣ ಯೋಜನೆಯ ಘೋಷಣೆಯಾದ ನಾವಿಬ್ಬರು ನಮಗಿಬ್ಬರು ಎಂಬ ಧ್ಯೇಯವಾಕ್ಯದಂತೆ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಹೇಳುವ ಮೂಲಕ ಯಾರ ಹೆಸರನ್ನೂ ಹೇಳದೇ ಟಾಂಗ್ ನೀಡಿದ್ದಾರೆ.
ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಖುಷಿ ಸುದ್ದಿ: ಒಂದು ಮಿಸ್ ಕಾಲ್ ನಲ್ಲಿ ಸಿಗುತ್ತೆ ಗೃಹ ಸಾಲದ ಸಂಪೂರ್ಣ ಮಾಹಿತಿ
ಪ್ರಧಾನಿ ಮೋದಿ ನಿನ್ನೆ ಇದು ರೈತರಿಗಿರುವ ಆಯ್ಕೆ ಎಂದು ಹೇಳಿದ್ದರು. ಆದರೆ ನಮ್ಮ ದೇಶದಲ್ಲಿ ರೈತರಿಗೆ ಇರುವ ಪ್ರಸ್ತುತ ಆಯ್ಕೆ ಹಸಿವು, ನಿರೋದ್ಯೋಗತನ ಹಾಗೂ ಆತ್ಮಹತ್ಯೆ ಮಾತ್ರ ಎಂದು ಹೇಳಿದ್ರು.
ಜಿಎಸ್ಟಿ ಅಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಮೂಲಕ ಸರ್ಕಾರ ಸಣ್ಣ ಉದ್ಯಮಿಗಳನ್ನ ನಾಶ ಮಾಡಿತು. ಇದೀಗ ಕೃಷಿ ಮಸೂದೆಗಳ ಮೂಲಕ ರೈತರನ್ನ ನಾಶ ಮಾಡೋಕೆ ಹೊರಟಿದೆ ಎಂದು ಆಕ್ರೋಶ ಹೊರಹಾಕಿದ್ರು.