alex Certify ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಖುಷಿ ಸುದ್ದಿ: ಒಂದು ಮಿಸ್ ಕಾಲ್ ನಲ್ಲಿ ಸಿಗುತ್ತೆ ಗೃಹ ಸಾಲದ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಖುಷಿ ಸುದ್ದಿ: ಒಂದು ಮಿಸ್ ಕಾಲ್ ನಲ್ಲಿ ಸಿಗುತ್ತೆ ಗೃಹ ಸಾಲದ ಸಂಪೂರ್ಣ ಮಾಹಿತಿ

ದೇಶದ ಪ್ರತಿಷ್ಠಿತ ಬ್ಯಾಂಕ್​ಗಳಲ್ಲಿ ಒಂದಾದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರಿಗೆ ಗೃಹ ಸಾಲ ಪಡೆಯುವ ಮಾರ್ಗ ಸುಲಭವಾಗುವ ನಿಟ್ಟಿನಲ್ಲಿ ಅತ್ಯುತ್ತಮವಾದ ಸೌಲಭ್ಯವೊಂದನ್ನ ಜಾರಿಗೆ ತಂದಿದೆ.

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಿಂದ ಗೃಹ ಸಾಲವನ್ನ ಪಡೆಯಲು ಇಚ್ಛಿಸುವ ಗ್ರಾಹಕರು 7208933140 ಸಂಖ್ಯೆಗೆ ಮಿಸ್ಡ್​ ಕಾಲ್​ ಕೊಡುವ ಮೂಲಕ ಎಲ್ಲಾ ಮಾಹಿತಿಯನ್ನ ಪಡೆಯಬಹುದಾಗಿದೆ. ಡಿಸೆಂಬರ್​​ ತಿಂಗಳಲ್ಲಿ ಎಸ್​ಬಿಐನಲ್ಲಿ ಗೃಹ ಸಾಲದಲ್ಲಿ ಉತ್ತಮ ಪ್ರಗತಿಯನ್ನ ಕಂಡಿದೆ ಎಂದು ಬ್ಯಾಂಕ್​ ಮಾಹಿತಿ ನೀಡಿದೆ.

ಎಸ್​​ಬಿಐ ತನ್ನ ಗ್ರಾಹಕರಿಗೆ ರೆಗ್ಯೂಲರ್​ ಹೋಂ ಲೋನ್, ಸರ್ಕಾರಿ ನೌಕರರಿಗೆ ಎಸ್​ಬಿಐ ಪ್ರಿವಿಲೇಜ್​ ಹೋಂ ಲೋನ್​, ಸೇನೆ ಹಾಗೂ ಭದ್ರತಾ ಸಿಬ್ಬಂದಿಗೆ ಎಸ್​ಬಿಐ ಶೌರ್ಯ ಹೋಂ ಲೋನ್​, ಎಸ್​​ಬಿಐ ಮ್ಯಾಕ್ಸ್​ ಗೇನ್​ ಹೋಂ ಲೋನ್​, ಎಸ್​ಬಿಐ ಸ್ಮಾರ್ಟ್​ ಹೋಂ, ಈಗಾಗಲೇ ಬ್ಯಾಂಕ್​ ಗ್ರಾಹಕರಾಗಿ ಇರುವವರಿಗೆ ಟಾಪಪ್​ ಹೋಂ, ಎನ್​ಆರ್​ಐ ಹೋಂ ಲೋನ್​, ಫ್ಲೆಕ್ಸಿ ಪೇ ಹೋಂ ಲೋನ್​ ಹೀಗೆ ಸಾಕಷ್ಟು ಆಯ್ಕೆಗಳನ್ನ ಹೊಂದಿದೆ.

ಗೃಹ ಸಾಲ ವಿಭಾಗದಲ್ಲಿ ಮೊದಲಿನಿಂದಲೂ ಉತ್ತಮ ಸಾಧನೆ ಮಾಡಿಕೊಂಡು ಬಂದಿರುವ ಎಸ್​ಬಿಐ ಪ್ರಸ್ತುತ ಒಟ್ಟು 5 ಲಕ್ಷ ಕೋಟಿ ರೂಪಾಯಿ ಗೃಹ ಸಾಲವನ್ನ ಗ್ರಾಹಕರಿಗೆ ನೀಡುವ ಮೂಲಕ ಹೊಸ ಮೈಲಿಗಲ್ಲನ್ನ ಸೃಷ್ಟಿಸಿದೆ. ಅಲ್ಲದೇ 2024ರ ವೇಳೆಗೆ 7 ಲಕ್ಷ ಕೋಟಿ ರೂಪಾಯಿ ಮೌಲ್ಯ ತಲುಪುವ ಗುರಿಯನ್ನ ಹೊಂದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...