ಬೆಂಗಳೂರು; ಸ್ಟಾರ್ ಹೋಟೆಲ್ ಗಳಲ್ಲಿ ಹೈಫೈ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡುತ್ತಾ, ಸ್ವತಃ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಬಿಡಿಎ ಬ್ರೋಕರ್ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಿಡಿಎ ಬ್ರೋಕರ್ ರವಿ, ಆಲ್ಬಮ್ ಸಾಂಗ್ ನಟ ಮೊಹಮ್ಮದ್ ಮುಜಾಯಿಲ್, ಫುಟ್ಬಾಲ್ ಆಟಗಾರ ಡೋಸಾ ಖಲಿಫಾ, ಶೋಹಿಬ್ ಉದ್ದೀನ್ ಎಂದು ಗುರುತಿಸಲಾಗಿದೆ.
ಕಾರು ಖರೀದಿಸಿದವನು ಮಾಡಿದ್ದಾನೆ ಯಾರೂ ನಂಬಲಾಗದ ಕಾರ್ಯ….!
ಜೆಪಿ ನಗರದ ಹರಿಕ್ ಬೋಟೆಕ್ ಹೋಟೆಲ್ ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿ ಬಿಡಿಎ ಬ್ರೋಕರ್ ಆಗಿದ್ದು, ಪ್ರಭಾವಿಗಳೊಂದಿಗೆ ಸ್ನೇಹ ಬೆಳೆಸಿ ಡ್ರಗ್ಸ್ ಜಾಲದ ಜೊತೆ ನಂಟು ಹೊಂದಿದ್ದ. ಇನ್ನೋರ್ವ ಆರೋಪಿ ಮುಜಾಹಿಲ್ ಹಿಂದಿ ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದ. ಮತ್ತೋರ್ವ ಆರೋಪಿ ಡೋಸಾ ಖಲೀಫಾ ವಿದೇಶಿ ಪ್ರಜೆಯಾಗಿದ್ದು, ಫುಟ್ಬಾಲ್ ಆಟಗಾರನಾಗಿದ್ದಾನೆ. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ. ಬಂಧಿತ ನಾಲ್ವರು ಆರೋಪಿಗಳು ಡ್ರಗ್ಸ್ ಪೆಡ್ಲರ್ ಗಳಾಗಿದ್ದು, ಶ್ರೀಲಂಕಾದ ಕ್ಯಾಸಿನೋ ನಂಟು ಹೊಂದಿದ್ದರು ಎನ್ನಲಾಗಿದೆ.