ವಿಶಾಖಪಟ್ಟಣಂ: ರೈಲ್ವೆ ಇಲಾಖೆಯ ಮಹಿಳಾ ಪೊಲೀಸ್ ಸಿಬ್ಬಂದಿ ಅಪಾಯದಲ್ಲಿದ್ದ ವ್ಯಕ್ತಿಯ ಜೀವ ರಕ್ಷಿಸಿದ ಘಟನೆ ಫೆ.8 ರಂದು ನಡೆದಿದೆ. ರೈಲ್ವೆ ಮಂತ್ರಾಲಯ ಈ ವಿಡಿಯೋವನ್ನು ಟ್ವೀಟ್ ಮಾಡಿದೆ.
ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲು ಏರಲು ಯತ್ನಿಸಿದ ವ್ಯಕ್ತಿ ಜಾರಿ ಕೆಳಗೆ ಬಿದ್ದಿದ್ದ. ಪ್ಲಾಟ್ ಫಾರ್ಮ್ ಹಾಗೂ ರೈಲಿನ ನಡುವೆ ಸಿಲುಕಿ ಸಾಯುವ ಹಂತ ತಲುಪಿದ್ದ. ಅಲ್ಲೇ ಇದ್ದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಇಬ್ಬರ ಸಹಕಾರದಿಂದ ಆತನನ್ನು ಪಕ್ಕಕ್ಕೆ ಎಳೆದು ರಕ್ಷಿಸಿದ್ದಾರೆ.
ಬೆಚ್ಚಿಬೀಳಿಸುವಂತಿದೆ ವೈರಲ್ ಆಗಿರುವ ಈ ವಿಡಿಯೋ
ನಿಲ್ದಾಣದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸನ್ನಿವೇಶ ದಾಖಲಾಗಿದೆ. “ಜಾಗೃತ ಮಹಿಳಾ ಪೊಲೀಸ್ ಸಿಬ್ಬಂದಿ ಮೇರಿ ಸಹೇಲಿ – ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಪರಿ” ಎಂದು ಕ್ಯಾಪ್ಶನ್ ನೀಡಲಾಗಿದೆ.