ತನ್ನ ಮನೆಯ ಮುಂದೆ ಇದ್ದ 42 ವರ್ಷದ ಬೇವಿನ ಮರವೊಂದನ್ನು ಕಡಿದ ಹೈದರಾಬಾದ್ನ ವ್ಯಕ್ತಿಯೊಬ್ಬನಿಗೆ ತೆಲಂಗಾಣ ಅರಣ್ಯ ಇಲಾಖೆ 62,075 ರೂ.ಗಳ ದಂಡ ವಿಧಿಸಿದೆ.
ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಕೊಟ್ಟ ಸುಳಿವಿನ ಆಧಾರದ ಮೇಲೆ ಅರಣ್ಯ ಇಲಾಖೆ ಈ ಕೆಲಸ ಮಾಡಿದೆ. ಇಲ್ಲಿನ ಸೈದಾಬಾದ್ ಪ್ರದೇಶದಲ್ಲಿರುವ ತಮ್ಮ ಮನೆಯ ಬಳಿ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗುತ್ತಿದ್ದ ಬೇವಿನ ಮರವನ್ನು ಜಿ. ಸಂತೋಷ್ ರೆಡ್ಡಿ ಎಂಬ ವ್ಯಕ್ತಿ ಕಡಿಸಿ ಹಾಕಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ: 20 DYSP, 86 ಇನ್ಸ್ ಪೆಕ್ಟರ್ ಗಳ ವರ್ಗಾವಣೆ
ಮರಕ್ಕೆ ಕೊಡಲಿ ಇಡಲಾಗಿದೆ ಎಂಬುದನ್ನು ಕಂಡುಕೊಂಡ ಶಾಲಾಬಾಲಕ ಅರಣ್ಯ ಇಲಾಖೆಗೆ ಕರೆ ಮಾಡಿ, ಮರ ಕಡಿದ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ದೂರು ಕೊಟ್ಟಿದ್ದಾನೆ. ತನ್ನನ್ನು ತಾನು ’ಗ್ರೀನ್ ಬ್ರಿಗೇಡಿಯರ್’ ಎಂದು ಕರೆದುಕೊಂಡ ಈ ಬಾಲಕ ಕೊಟ್ಟ ಮಾಹಿತಿ ಅನ್ವಯ ತನಿಖೆ ನಡೆಸಿದ ಅರಣ್ಯ ಇಲಾಖೆ ಮರ ಕಡಿಯುವಲ್ಲಿ ಭಾಗಿಯಾದ ಮಂದಿ ಯಾರೆಂದು ಪತ್ತೆ ಮಾಡಿ ಅವರಿಗೆ ದಂಡ ವಿಧಿಸಿದ್ದಾರೆ.
ಮುಂಜಾನೆ 4 ಗಂಟೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಮರ ಕಡಿಯುವ ಸದ್ದು ಕೇಳಿ ಎಚ್ಚೆತ್ತ ಬಾಲಕ, ತನ್ನೆದುರು ಮರವನ್ನು ಸಾಗಿಸುತ್ತಿರುವ ವಿಚಾರವನ್ನು ಅರಣ್ಯ ಇಲಾಖೆಗೆ ಮುಟ್ಟಿಸಿದ್ದಾನೆ. ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೋಡಿದಾಗ ಮರ ಕಡಿಯುವ ಸಲಕರಣೆಗಳು ಹಾಗೂ ಸೀದು ಹಾಕಲಾದ ಮರದ ಬುಡವನ್ನು ಕಂಡಿದ್ದಾರೆ. ಅನುಮತಿ ಇಲ್ಲದೇ ಮರ ಕಡಿದ ಕಾರಣ ಆಪಾದಿತರಿಗೆ ದಂಡ ಹಾಕಲಾಗಿದೆ.