ಎರಡು ಗ್ಯಾಂಗ್‌ಗಳ ನಡುವೆ ನಡೆದ ಶೂಟೌಟ್‌ನಲ್ಲಿ ಕನಿಷ್ಠ ಒಬ್ಬರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಮೆಕ್ಸಿಕೋದ ರೆಸ್ಟೋರಂಟ್ ಒಂದರಲ್ಲಿ ಜರುಗಿದೆ.
ಜಾಲ್ಸಿಕೋ ಎಂಬ ಪಟ್ಟಣದಲ್ಲಿರುವ ಲಾಸ್ ಓಟ್ಸ್ ರೆಸ್ಟೋರಂಟ್‌ನಲ್ಲಿ ಈ ಘಟನೆ ಜರುಗಿದ್ದು, ಡ್ರಗ್ ಗ್ಯಾಂಗ್ ಒಂದು ತನ್ನ ವೈರಿ ಗ್ಯಾಂಗ್‌ನ ವ್ಯಕ್ತಿಯೊಬ್ಬನನ್ನು ಅಪಹರಿಸಲು ಯತ್ನಿಸಿದ ಸಂದರ್ಭದಲ್ಲಿ ಶೂಟೌಟ್ ನಡೆದಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಇನ್ನೂ ಯಾರನ್ನೂ ಬಂಧಿಸಿಲ್ಲ.
ಸಾಮಾಜಿಕ ಅಂತರ ಕಾಪಾಡಲು ರೋಬೊಟ್ ಬಳಕೆ….!
ಕೊಲೆಯಾದ ವ್ಯಕ್ತಿಯ ಜೊತೆಗೆ ಇಬ್ಬರು ವೇಟರ್‌ಗಳು ಹಾಗೂ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ. ಘಟನೆಯನ್ನು ಸಿಸಿ ಟಿವಿ ಕ್ಯಾಮೆರಾ ಸೆರೆ ಹಿಡಿದಿದ್ದು, ಗ್ಯಾಂಗ್ ವಾರ್‌ನ ದೃಶ್ಯಾವಳಿಗಳೆಲ್ಲವೂ ದಾಖಲಾಗಿವೆ.
https://twitter.com/DavidVargasA18/status/1358918860112592898?ref_src=twsrc%5Etfw%7Ctwcamp%5Etweetembed%7Ctwterm%5E1358918860112592898%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fmexico-shootout-mobster-drug-rival-gang-viral-video-3415070.html