ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ಯಾಂಡಲ್ವುಡ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಂದು ಸುಧಾಕರ್ ಚಿತ್ರರಂಗದಲ್ಲಿ ಸಕ್ರಿಯವಾಗಲಿದ್ದಾರಾ ಎಂದು ಭಾವಿಸಿಕೊಳ್ಳಬೇಡಿ. ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯಾರ್ಥಿನಿಯೊಬ್ಬರಿಗೆ ನೆರವಾದ ನೈಜ ಘಟನೆ ಆಧಾರಿತ ಸಿನಿಮಾದಲ್ಲಿ ಸುಧಾಕರ್ ಕಾಣಿಸಿಕೊಳ್ಳುತ್ತಿದ್ದಾರೆ.
ಕೊರೊನಾ ಸಂದರ್ಭದಲ್ಲಿ ತನುಜಾ ಎಂಬ ವಿದ್ಯಾರ್ಥಿನಿಗೆ ಅವರು ವಾಸವಿದ್ದ ಮನೆಯ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದ್ದ ಕಾರಣ ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಮತ್ತೊಂದು ಅವಕಾಶ ಸಿಕ್ಕಾಗ ಇಂಟರ್ನೆಟ್ ಸಮಸ್ಯೆಯಿಂದ ದಾಖಲೆಗಳನ್ನು ಕಳುಹಿಸಲು ಸಾಧ್ಯವಾಗಿರಲಿಲ್ಲ.
ಅಮಿತ್ ಶಾ ಮಹಾರಾಷ್ಟ್ರ ಭೇಟಿ ಬೆನ್ನಲ್ಲೇ ‘ಬಿಜೆಪಿ’ ಗೆ ಬಿಗ್ ಶಾಕ್
ತಾವು ಎದುರಿಸಿದ ಎಲ್ಲ ಸಮಸ್ಯೆಯನ್ನು ತನುಜಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಗಮನಕ್ಕೆ ಬರುತ್ತಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ಪರೀಕ್ಷಾ ಪ್ರಾಧಿಕಾರದ ತಾಂತ್ರಿಕ ಅಧಿಕಾರಿಗಳೊಂದಿಗೆ ಮಾತನಾಡಿ ತನುಜಾ ಅವರು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದರು. ಈ ಪರೀಕ್ಷೆಯಲ್ಲಿ ಯಶಸ್ವಿಯಾದ ತನುಜ ಈಗ ಎಂಬಿಬಿಎಸ್ ಸೀಟ್ ಪಡೆದುಕೊಂಡಿದ್ದಾರೆ.
ಈ ಘಟನೆಯನ್ನು ಆಧರಿಸಿದ ಚಿತ್ರ ಈಗ ತಯಾರಾಗುತ್ತಿದ್ದು, ನಿಜ ಜೀವನದಲ್ಲೂ ಈ ವಿದ್ಯಾರ್ಥಿನಿಗೆ ನೆರವಾಗಿದ್ದ ಡಾ. ಸುಧಾಕರ್ ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಚಿತ್ರ ಬಿಡುಗಡೆಯಾದ ಬಳಿಕವಷ್ಟೇ ತಿಳಿದುಬರಲಿದೆ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.