alex Certify ಮನೆ ಖರೀದಿಸುವವರಿಗೆ SBI ನಿಂದ ಭರ್ಜರಿ ಬಂಪರ್‌ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಖರೀದಿಸುವವರಿಗೆ SBI ನಿಂದ ಭರ್ಜರಿ ಬಂಪರ್‌ ಸುದ್ದಿ

ಹೊಸ ವರ್ಷದಲ್ಲಿ ಮನೆ ಖರೀದಿ ಆಲೋಚನೆಯಲ್ಲಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಗ್ಗದ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡ್ತಿದೆ. ಎಸ್ಬಿಐ ಹೊಸ ಗ್ರಾಹಕರಿಗೆ ಶೇಕಡಾ 6.8ರಷ್ಟು ಬಡ್ಡಿ ದರದಲ್ಲಿ ಗೃಹ ಸಾಲ ನೀಡ್ತಿದೆ.

ಎಸ್‌ಬಿಐ ಬ್ಯಾಂಕ್ ಗ್ರಾಹಕರು ಯಾವುದೇ ಸಂಸ್ಕರಣಾ ಶುಲ್ಕವಿಲ್ಲದೆ ಮಾರ್ಚ್ 2021 ರವರೆಗೆ ಶೇಕಡಾ 6.8 ರ ಬಡ್ಡಿ ದರದಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು. ಬ್ಯಾಂಕ್ 7208933140 ಸಂಖ್ಯೆಯನ್ನು ನೀಡಿದೆ. ಹೊಸ ಗ್ರಾಹಕರು ಈ ನಂಬರ್ ಗೆ ಕರೆ ಮಾಡಿ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

10 ಸಾವಿರಕ್ಕಿಂತ ಕಡಿಮೆ ಹೂಡಿಕೆ ಮಾಡಿ ಶುರುಮಾಡಿ ಈ ಬ್ಯುಸಿನೆಸ್

ಎಸ್‌ಬಿಐ ಮತ್ತೊಂದು ದಾಖಲೆ ಬರೆದಿದೆ. ಗೃಹ ಸಾಲ ವಿಭಾಗದಲ್ಲಿ ಎಸ್‌ಬಿಐ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಎಸ್‌ಬಿಐ ಗೃಹ ಸಾಲ ವ್ಯವಹಾರದಲ್ಲಿ 5 ಲಕ್ಷ ಕೋಟಿ ರೂಪಾಯಿ ದಾಟಿದೆ. ಕಳೆದ 10 ವರ್ಷಗಳಲ್ಲಿ ಎಸ್‌ಬಿಐನ ರಿಯಲ್ ಎಸ್ಟೇಟ್ ಮತ್ತು ವಸತಿ ವ್ಯವಹಾರ ಐದು ಪಟ್ಟು ಹೆಚ್ಚಾಗಿದೆ ಎಂದು ಬ್ಯಾಂಕ್ ಹೇಳಿದೆ. 2011 ರಲ್ಲಿ ವ್ಯಾಪಾರ 89,000 ಕೋಟಿ ರೂಪಾಯಿ ಆಗಿದ್ದು, ಇದು 2021 ರಲ್ಲಿ 5 ಲಕ್ಷ ಕೋಟಿ ತಲುಪಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...