ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನನ್ನ ಕೈಲಿ ಅಧಿಕಾರ ಇದ್ದಿದ್ದರೆ ಎಲ್ಲವನ್ನೂ ಬರೆದುಕೊಟ್ಟುಬಿಡುತ್ತಿದ್ದೆ. ಆದರೆ ನನ್ನ ಕೈಲಿ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ರೈತರ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮ ಇಂಡಸ್ಟ್ರಿ ಸಮಸ್ಯೆಯನ್ನೇ ಬಗೆಹರಿಸೋಕೆ ಆಗುತ್ತಿಲ್ಲ. ಇನ್ನು ಬೇರೆಯವರ ಸಮಸ್ಯೆ ಪರಿಹರಿಸುವುದು ಹೇಗೆ? ಆದರೆ ಹೋರಾಟಕ್ಕೆ ನಮ್ಮ ಬೆಂಬಲವಿದೆ. ರೈತರ ಹೋರಾಟದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ಇದು ಚಿತ್ರರಂಗದಿಂದ ಬಗೆಹರಿಸುವ ಸಮಸ್ಯೆಯಲ್ಲ.
ಫೆಬ್ರವರಿ 12ರಂದು ‘ಮದಗಜ’ ಚಿತ್ರದ ಜಗಪತಿ ಬಾಬು ಫಸ್ಟ್ ಲುಕ್ ರಿಲೀಸ್
ಬೀದಿಗಿಳಿಯುವುದರಿಂದ ಏನೂ ಆಗಲ್ಲ. ಇಂಡಸ್ಟ್ರಿಯವರು, ಭಾರತೀಯ ಚಿತ್ರರಂಗ ಬೀದಿಗೆ ಇಳಿದು ಹೋರಾಡುವುದರಿಂದ ಸಮಸ್ಯೆ ಬಗೆಹರಿಯುದಿದ್ದರೆ ನಾವೂ ಬೀದಿಗಿಳಿಯಲು ಸಿದ್ಧ. ಆದರೆ ಸರ್ಕಾರದಿಂದ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದರು.
ರೈತರು ಇಂದು ಬೀದಿಯಲ್ಲಿ ಕುಳಿತು ಊಟ ಮಾಡುತ್ತಾ ಹೋರಾಡುವುದನ್ನು ನೋಡಿದರೆ ಹೊಟ್ಟೆ ಉರಿಯುತ್ತೆ. ನನ್ನ ಕೈಲಿ ಅಧಿಕಾರ ಇದ್ದಿದ್ದರೆ ಎಲ್ಲವನ್ನೂ ಬರೆದುಕೊಟ್ಟುಬಿಡುತ್ತಿದ್ದೆ. ಆದರೆ ನನ್ನ ಕೈಲಿ ಏನೂ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಶಿವಣ್ಣ, ಸರ್ಕಾರ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದ್ದಾರೆ.