ಚಿಪ್ಸ್, ಪಿಜ್ಜಾದಂತಹ ಆಹಾರ ಸೇವನೆ ಮಾಡುವವರಿಗೆ ಕೊಲೆಸ್ಟ್ರಾಲ್ ಹಾಗೂ ಹೃದಯ ಸಂಬಂಧಿ ಖಾಯಿಲೆಗಳು ಕಾಡುತ್ತವೆ. ಇದಕ್ಕೆ ದೊಡ್ಡ ಕಾರಣ ಟ್ರಾನ್ಸ್ ಫ್ಯಾಟ್ಸ್. ಇದು ಆಹಾರವನ್ನು ತುಂಬಾ ಸಮಯ ಹಾಳಾಗದಂತೆ ನೋಡಿಕೊಳ್ಳುತ್ತದೆ. ಇದು ಗೊತ್ತಿದ್ದರೂ ಅನೇಕರು ಪಿಜ್ಜಾ, ಚಿಪ್ಸ್ ಸೇರಿದಂತೆ ಫಾಸ್ಟ್ ಫುಡ್ ಸೇವನೆ ಕಡಿಮೆ ಮಾಡುವುದಿಲ್ಲ.
ನಿಮಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಬಿಡಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡುತ್ತದೆ. ಎಫ್ ಎಸ್ ಎಸ್ ಎ ಐ ಎಲ್ಲ ಆಹಾರ ಪದಾರ್ಥಗಳ ಟ್ರಾನ್ಸ್ ಫ್ಯಾಟ್ಸ್ ನಿಗದಿಪಡಿಸಿದೆ. ಈ ಬಗ್ಗೆ ಎಫ್ ಎಸ್ ಎಸ್ ಎ ಐ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಬೇರೆ ದೇಶದಂತೆಯೇ ನಮ್ಮ ದೇಶದಲ್ಲೂ ಟ್ರಾನ್ಸ್ ಫ್ಯಾಟ್ಸ್ ನಿಗದಿಪಡಿಸುವುದಾಗಿ ಎಫ್ ಎಸ್ ಎಸ್ ಎ ಐ ಹೇಳಿದೆ. 40 ದೇಶಗಳಲ್ಲಿ ನೀತಿ ಜಾರಿಯಲ್ಲಿದೆ.
ಈತನ ಮಾಸ್ಕ್ ನೋಡಿ ಬೇಸ್ತು ಬಿದ್ದ ಜನ….!
ಜನವರಿ 2021ರಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ. ಯಾವುದೇ ಕೊಬ್ಬು, ತೈಲ ಬಳಸುವ ಆಹಾರದಲ್ಲಿ ಶೇಕಡಾ 3 ಕ್ಕಿಂತ ಹೆಚ್ಚಿನ ಟ್ರಾನ್ಸ್ ಫ್ಯಾಟ್ಸ್ ಬಳಸುವಂತಿಲ್ಲ. ಮುಂದಿನ ವರ್ಷ ಇದನ್ನು ಶೇಕಡಾ 2ಕ್ಕೆ ಇಳಿಸಲಾಗುವುದು. ಹಾಲು, ಮೊಸರು, ತುಪ್ಪ, ಚೀಸ್ ಮತ್ತು ಮಾಂಸ, ಮೊಟ್ಟೆಗಳಲ್ಲಿ ನೈಸರ್ಗಿಕ ಟ್ರಾನ್ಸ್ ಫ್ಯಾಟ್ಸ್ ಇರುತ್ತದೆ. ಇವುಗಳಿಂದ ಸಾಕಷ್ಟು ಪ್ರಯೋಜನವಿದೆ. ಆದ್ರೆ ಇದ್ರ ಸೇವನೆ ಪ್ರಮಾಣ ಕೂಡ ಮಿತಿ ಮೀರಬಾರದು.
ಇನ್ನೊಂದು ಕೃತಕ ಟ್ರಾನ್ಸ್ ಫ್ಯಾಟ್ಸ್. ಇದನ್ನು ಎಣ್ಣೆ ಆಹಾರ, ಪ್ಯಾಕೆಟ್ ಆಹಾರದಲ್ಲಿ ಬಳಸಲಾಗುತ್ತದೆ. ಕಂಪನಿಗಳು ಟ್ರಾನ್ಸ್ ಫ್ಯಾಟ್ಸನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತವೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.