ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿವಿಧ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಇದಾದ ಬಳಿಕ ಭಕ್ತರ ಮನವಿ ಮೇರೆಗೆ ನಿರ್ದಿಷ್ಟ ಷರತ್ತಿಗೆ ಒಳಪಟ್ಟು ದೈನಂದಿನ ಪೂಜಾ ಕಾರ್ಯಗಳಿಗೆ ಅವಕಾಶ ಕಲ್ಪಿಸಲಾಗುತ್ತಿಲ್ಲದೆ ದರ್ಶನಕ್ಕೂ ಅನುಮತಿ ನೀಡಲಾಗಿತ್ತು. ಆದರೆ ಧಾರ್ಮಿಕ ಉತ್ಸವಗಳಿಗೆ ಮಾತ್ರ ನಿರ್ಬಂಧ ಮುಂದುವರೆದಿತ್ತು.
ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಕಾರಣ ಆರೋಗ್ಯ ಇಲಾಖೆಯ ಅಭಿಪ್ರಾಯವನ್ನು ಪಡೆದು ಧಾರ್ಮಿಕ ಉತ್ಸವಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದೆ. ಧಾರ್ಮಿಕ ದತ್ತಿ ಇಲಾಖೆ ಮಂಗಳವಾರದಂದು ಈ ಕುರಿತು ಸುತ್ತೋಲೆ ಹೊರಡಿಸಿದ್ದು ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಕೊರೊನಾ ಹರಡಲು ಮುಂದಾದವನ ವಿರುದ್ದ ಕೊಲೆ ಕೇಸ್
ಹೀಗಾಗಿ ಎಲ್ಲ ಧಾರ್ಮಿಕ ಸೇವೆ, ಜಾತ್ರಾ ಮಹೋತ್ಸವ, ಬ್ರಹ್ಮ ರಥೋತ್ಸವ, ಅನ್ನ ದಾಸೋಹ ಪ್ರಸಾದ ವಿತರಣೆ, ಪವಿತ್ರೋತ್ಸವ ಮೊದಲಾದ ಕಾರ್ಯಗಳನ್ನು ಮೊದಲಿನಂತೆ ನೆರವೇರಿಸಬಹುದಾಗಿದೆ. ಸರ್ಕಾರದ ಆದೇಶದಿಂದಾಗಿ ರಾಜ್ಯದ ದೇವಸ್ಥಾನ, ಮಠಗಳು ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಇನ್ನು ಮುಂದೆ ಎಂದಿನಂತೆ ಸಂಪ್ರದಾಯ ರೀತ್ಯಾ ಜಾತ್ರಾ ಮಹೋತ್ಸವ ನಡೆಯಲಿದೆ.