ತಿಂಗಳ ಆರಂಭದಲ್ಲಿ ಮನೆ ಬಾಡಿಗೆ ನೀಡುವುದು ಒಂದು ಬೇಸರದ ಸಂಗತಿ. ಬಂದ ಸಂಬಳದಲ್ಲಿ ಅರ್ಧ ಭಾಗ ಮನೆ ಬಾಡಿಗೆಗೆ ಹೋಗುತ್ತದೆ. ಖಾತೆಯಲ್ಲಿ ಹಣವಿಲ್ಲವೆಂದ್ರೆ ಮನೆ ಬಾಡಿಗೆ ನೀಡುವುದು ಕಷ್ಟವಾಗುತ್ತದೆ. ಆದ್ರೆ ಇನ್ಮುಂದೆ ಚಿಂತೆಪಡಬೇಕಾಗಿಲ್ಲ. ಡೆಬಿಟ್, ಕ್ರೆಡಿಟ್ ಹೊಂದಿದ್ದರೆ ನಿಮ್ಮ ಮನೆ ಬಾಡಿಗೆಯನ್ನು ನೀವು ಪೇಟಿಎಂ ಮೂಲಕ ಪಾವತಿಸಬಹುದು.
ಶಾಪಿಂಗ್, ಬಸ್, ರೈಲು ಮತ್ತು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಲು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತೇವೆ. ಆದರೆ ಮನೆ ಮಾಲೀಕರಿಗೆ ಕ್ರೆಡಿಟ್ ಕಾರ್ಡ್ ನೀಡುವ ಮೂಲಕ, ಬಾಡಿಗೆ ಕಡಿತಗೊಳಿಸಲು ಹೇಳಲಾಗುವುದಿಲ್ಲ. ನಗದು ನೀಡಬೇಕು. ಇಲ್ಲವೆ ಯುಪಿಐ ಮೂಲಕ ವರ್ಗಾಯಿಸಬಹುದು.
ಇದನ್ನು ಗಮನದಲ್ಲಿಟ್ಟುಕೊಂಡು, ಪೇಟಿಎಂ ತನ್ನ ಬಾಡಿಗೆ ಪಾವತಿ ವೈಶಿಷ್ಟ್ಯವನ್ನು ವಿಸ್ತರಿಸಿದೆ. ಕ್ರೆಡಿಟ್ ಕಾರ್ಡ್ ಮೂಲಕ ನೇರವಾಗಿ ಮಾಲೀಕರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು. ಈ ಹಿಂದೆ ಯುಪಿಐ, ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಬಾಡಿಗೆ ಪಾವತಿಸುವ ಸೌಲಭ್ಯವನ್ನು ಪೇಟಿಎಂ ಹೊಂದಿತ್ತು.
ಇಷ್ಟೇ ಅಲ್ಲ ಪೇಟಿಎಂ ಸೌಲಭ್ಯ ಬಳಸಿಕೊಂಡು ನೀವು ಬಾಡಿಗೆ ಪಾವತಿ ಮಾಡಿದ್ರೆ ನಿಮಗೆ 1000 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗುತ್ತದೆ. ಅಲ್ಲದೆ ಕ್ರೆಡಿಟ್ ಕಾರ್ಡ್ ಪಾಯಿಂಟ್ ಕೂಡ ಪಡೆಯುತ್ತೀರಿ.
ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಿದ್ರೆ ತಕ್ಷಣ ನಿಮ್ಮ ಜೇಬಿನಲ್ಲಿರುವ ಹಣ ಖಾಲಿಯಾಗುವುದಿಲ್ಲ. ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸಲು 45-50 ದಿನಗಳ ಸಮಯವಿರುತ್ತದೆ. ಅದನ್ನು ಇಎಂಐ ಆಗಿ ಪರಿವರ್ತಿಸಿ ಆರಾಮವಾಗಿ ಪಾವತಿ ಮಾಡಬಹುದು.