alex Certify ಮೊದಲೇ ಸಂಕಷ್ಟದಲ್ಲಿರುವ ಜನತೆಗೆ ಮತ್ತೊಂದು ಶಾಕ್:‌ ಮತ್ತಷ್ಟು ದುಬಾರಿಯಾಗಲಿದೆ ರೈಲು ಪ್ರಯಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲೇ ಸಂಕಷ್ಟದಲ್ಲಿರುವ ಜನತೆಗೆ ಮತ್ತೊಂದು ಶಾಕ್:‌ ಮತ್ತಷ್ಟು ದುಬಾರಿಯಾಗಲಿದೆ ರೈಲು ಪ್ರಯಾಣ

ಭಾರತೀಯ ರೈಲ್ವೆ ಸೇವೆಯನ್ನ ಇನ್ನೂ ಹೈಫೈ ಮಾಡುವುದಕ್ಕಾಗಿ ಹಣ ಖರ್ಚು ಮಾಡಲು ನೀವಿನ್ನು ತಯಾರಾಗೋಕೆ ಅಡ್ಡಿ ಇಲ್ಲ. ಏಕೆಂದರೆ ಬಹಳ ಸಮಯದಿಂದ ಚರ್ಚೆಯಲ್ಲಿದ್ದ ಏರ್​ಪೋರ್ಟ್​ಗಳಂತೆಯೇ ರೈಲ್ವೆ  ನಿಲ್ದಾಣಗಳಲ್ಲೂ ಯೂಸರ್​ ಡೆವಲಪ್​ಮೆಂಟ್​ ಫೀಸನ್ನು ಇನ್ಮೇಲೆ ತೆಗೆದುಕೊಳ್ಳಲಾಗುತ್ತೆ.

ಈ ವಿಚಾರವಾಗಿ ಕೇಂದ್ರ ರೈಲ್ವೆ ಸಚಿವಾಲಯ ಕ್ಯಾಬಿನೆಟ್​ ನೋಟ್​ ಜಾರಿ ಮಾಡಿದೆ. ಅಂದರೆ ಯುಡಿಎಫ್​ ಜಾರಿಗೆ ಬರಲು ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ನೀತಿ ಆಯೋಗದೊಂದಿಗೆ ಚರ್ಚೆ ನಡೆಸಿದ ಬಳಿಕ ಯುಡಿಎಫ್​​ ಕ್ಯಾಬಿನೆಟ್​ ನೋಟ್​ ಜಾರಿ ಮಾಡಲಾಗಿದೆ. ಫೆಬ್ರವರಿಯ ಮೊದಲ ವಾರದಲ್ಲಿ ರೈಲ್ವೆ ಸಚಿವಾಲಯ ಹಾಗೂ ನೀತಿ ಆಯೋಗದ ನಡುವೆ ನಡೆದ ಮಾತುಕತೆಯಲ್ಲಿ ಯುಡಿಎಫ್​ ಫಾರ್ಮುಲಾ ವಿಚಾರದಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.

ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಂದ ಈ ಶುಲ್ಕವನ್ನ ತೆಗೆದುಕೊಳ್ಳುವ ಸಲುವಾಗಿ ಕೇಂದ್ರ ರೈಲ್ವೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಎಲ್ಲಾ ಹಂತಗಳು ಮುಗಿದ ಬಳಿಕ ಈ ಶುಲ್ಕ ವಸೂಲಾತಿ ಪ್ರಕ್ರಿಯೆ ಜಾರಿಯಾಗಲಿದೆ.

ಈಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಅಂದರೆ ಪ್ರತಿಯೊಬ್ಬ ಪ್ರಯಾಣಿಕನೂ ಈ ಯುಡಿಎಫ್​ಗೆ ಹಣ ವ್ಯಯಿಸಲೇಬೇಕೆ..? ಪ್ರತಿ ನಿಲ್ದಾಣಗಳಲ್ಲೂ ಈ ಹಣವನ್ನ ವಸೂಲಿ ಮಾಡಲಾಗುತ್ತದೆಯೇ ಎಂದು. ಆದರೆ ಈ ಶುಲ್ಕ ಖಾಸಗಿ ಕಂಪನಿಗಳಿಂದ ಅಭಿವೃದ್ಧಿ ಕಾಣುತ್ತಿರುವ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ಜಾರಿಗೆ ಬರಲಿದೆ. ನಮ್ಮ ದೇಶದಲ್ಲಿ 700 ರಿಂದ 1000 ರೈಲ್ವೆ ನಿಲ್ದಾಣಗಳಲ್ಲಿ ಈ ಯುಡಿಎಫ್​ ಪಾವತಿ ಮಾಡಬೇಕಾಗುತ್ತೆ ಎಂದು ರೈಲ್ವೆ ಬೋರ್ಡ್ ಸಿಇಒ ಮಾಹಿತಿ ನೀಡಿದ್ದಾರೆ. ಇದರಲ್ಲಿ ದೆಹಲಿ, ಮುಂಬೈ, ಇಂದೋರ್​ ಹಾಗೂ ಚಂಡೀಘಡ್​ನ ರೈಲ್ವೆ ನಿಲ್ದಾಣಗಳು ಇವೆ.

ಯುಡಿಎಫ್​ಗೆ ಎಷ್ಟು ಹಣವನ್ನ ವ್ಯಯಿಸಬೇಕು ಅನ್ನೋ ವಿಚಾರವಾಗಿ ಈವರೆಗೆ ಯಾವುದೇ ನಿರ್ಧಾರವನ್ನ ಕೇಂದ್ರ ಸಚಿವಾಲಯ ಪ್ರಕಟಿಸಿಲ್ಲ. ಆದರೆ 30 ರಿಂದ 40 ರೂಪಾಯಿ ಶುಲ್ಕ ವಸೂಲಾತಿ ಮಾಡಬಹುದೆಂದು ಅಂದಾಜಿಸಲಾಗಿದೆ. ವಿವಿಧ ಶ್ರೇಣಿಯ ಟಿಕೆಟ್​ಗಳಿಗೆ ಯುಡಿಎಫ್​ ಮೊತ್ತ ಬದಲಾಗಬಹುದು. ಅಂದರೆ ಎಸಿ1ಗೆ ಅತೀ ಹೆಚ್ಚು, ಎಸಿ 2 ವಿಭಾಗಕ್ಕೆ ಸ್ವಲ್ಪ ಕಡಿಮೆ, ಎಸಿ3ಗೆ ಅದಕ್ಕೂ ಕಡಿಮೆ ಈ ರೀತಿ ಶುಲ್ಕವನ್ನ ವಿಧಿಸಬಹುದು ಎಂದು ಅಂದಾಜಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...