ಪಿಎಂ ಕಿಸಾನ್ ಸಮ್ಮಾನ್ ನಿಧಿ ಲಾಭ ಪಡೆದುಕೊಳ್ಳುತ್ತಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಪಿಎಂ ಕಿಸಾನ್ ನಿಯಮದಲ್ಲಿ ದೊಡ್ಡ ಬದಲಾವಣೆಯಾಗಿದೆ. ಯಾರ ಹೆಸರಿನಲ್ಲಿ ಹೊಲವಿದೆಯೋ ಆ ರೈತರಿಗೆ ಮಾತ್ರ 6 ಸಾವಿರ ರೂಪಾಯಿ ಸಿಗಲಿದೆ. ಈ ಯೋಜನೆಯಲ್ಲಿ ಅನೇಕ ವಂಚನೆ ನಡೆದಿದ್ದು, ಅದನ್ನು ತಡೆಯಲು ಸರ್ಕಾರ ಈ ಕೆಲಸ ಮಾಡಿದೆ.
ಈಗ ಯೋಜನೆಯ ಲಾಭ ಪಡೆಯಲು ಬಯಸುವ ರೈತರು ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಬೇಕು. ಇನ್ನೂ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳದ ಅನೇಕ ರೈತರಿದ್ದಾರೆ. ಈ ಹೊಸ ನಿಯಮ ಈಗಾಗಲೇ ಹೆಸರು ನೋಂದಾಯಿಸಿರುವ ರೈತರ ಮೇಲೆ ಪ್ರಭಾವ ಬೀರುವುದಿಲ್ಲ. ಹೊಸದಾಗಿ ಹೆಸರು ನೋಂದಾಯಿಸುವವರಿಗೆ ಈ ನಿಯಮ ಅನ್ವಯವಾಗುತ್ತದೆ.
ಹೊಸದಾಗಿ ನೋಂದಣಿ ಮಾಡುವ ಅರ್ಜಿದಾರರು ತಮ್ಮ ಜಮೀನಿನ ಪ್ಲಾಟ್ ಸಂಖ್ಯೆಯನ್ನು ಅರ್ಜಿ ನಮೂನೆಯಲ್ಲಿ ನೀಡಬೇಕಾಗುತ್ತದೆ. ಜಂಟಿ ಜಮೀನು ಹೊಂದಿರುವ ಜನರು ತಮ್ಮ ಹೆಸರಿನಲ್ಲಿ ಪಾಲನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು.
ತಂದೆ ಅಥವಾ ಅಜ್ಜನ ಹೆಸರಿನಲ್ಲಿ ಜಮೀನಿದ್ದು, ಉಳಿಮೆಯನ್ನು ಮೊಮ್ಮಗ ಮಾಡ್ತಿದ್ದರೆ ಮೊಮ್ಮಗನಿಗೆ ಹಣ ಸಿಗುವುದಿಲ್ಲ. ಒಬ್ಬ ರೈತ ಮತ್ತೊಬ್ಬ ರೈತನಿಂದ ಬಾಡಿಗೆಗೆ ಭೂಮಿ ಪಡೆದಿದ್ದರೂ ಅವನಿಗೆ ಯೋಜನೆಯ ಲಾಭವೂ ಸಿಗುವುದಿಲ್ಲ. ಈ ಯೋಜನೆಯಲ್ಲಿ ಭೂಮಿಯ ಮಾಲೀಕತ್ವ ಅಗತ್ಯ. ಒಬ್ಬ ರೈತ ಅಥವಾ ಕುಟುಂಬದಲ್ಲಿ ಯಾರಾದರೂ ಸಾಂವಿಧಾನಿಕ ಹುದ್ದೆಯಲ್ಲಿದ್ದರೆ ಅವರಿಗೆ ಲಾಭ ಸಿಗುವುದಿಲ್ಲ. 10,000 ರೂಪಾಯಿಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರಿಗೆ ಇದರ ಲಾಭ ದೊರೆಯುವುದಿಲ್ಲ.
ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ಪ್ರತಿ ವರ್ಷ 6,000 ರೂಪಾಯಿ ನೀಡುತ್ತಿದೆ. ಸರ್ಕಾರದ ಗುರಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸುತ್ತದೆ.