ಚೀನಾ ಮಾಲೀಕತ್ವದ ಬ್ರಿಟಿಷ್ ಕಾರು ತಯಾರಕ ಸಂಸ್ಥೆ ಎಂಜಿ ಮೋಟರ್ಸ್ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನ ಇಂದು ಲೋಕಾರ್ಪಣೆ ಮಾಡಿದೆ. ಎಂಜಿ ಮೋಟಾರ್ಸ್ ಕಂಪನಿಯ ಎಸ್ಯುವಿ ಎಲೆಕ್ಟ್ರಿಕ್ ಕಾರು ಮಾದರಿಯ ಸುಧಾರಿತ ಮಾಡೆಲ್ MG ZS EV ಆಗಿದೆ.
ಇಂದು ಭಾರತದಲ್ಲಿ ಲಾಂಚ್ ಆದ MG ZS EV ಕಾರು ಹೊಸ ಹೆಚ್ಟಿ ಬ್ಯಾಟರಿ, 17 ಇಂಚು ಟೈರ್ ಸೇರಿದಂತೆ ವಿವಿಧ ಅತ್ಯಾಧುನಿಕ ಸೌಲಭ್ಯಗಳನ್ನ ಹೊಂದಿದೆ.
ಇಂದು ಲಾಂಚ್ ಆದ MG ZS EV ಕಾರಿಗೆ ಕಂಪನಿಯುವ 20.99 ಲಕ್ಷ ರೂಪಾಯಿಯನ್ನು ನಿಗದಿ ಮಾಡಿದೆ. ಹಾಗೂ ಎಕ್ಸ್ಕ್ಲೂಸಿವ್ ಟ್ರಿಮ್ ಬೆಲೆ 24.18 ಲಕ್ಷ ರೂಪಾಯಿ ಇರಲಿದೆ ಎಂದು ಕಂಪನಿ ತಿಳಿಸಿದೆ.
ಹೆಕ್ಟರ್ ಫೇಸ್ಲಿಫ್ಟ್ ಬಳಿಕ 2021ರಲ್ಲಿ ಲಾಂಚ್ ಆದ ಎಂಜಿ ಮೋಟರ್ಸ್ನ ಎರಡನೇ ಉತ್ಪನ್ನ ಇದಾಗಿದೆ. ಗುಜರಾತ್ನ ಉತ್ಪಾದನಾ ಘಟಕದಲ್ಲಿ ಈ ಕಾರನ್ನ ತಯಾರಿಸಲಾಗುತ್ತಿದೆ.
ಬಾಹ್ಯ ವಿನ್ಯಾಸದಲ್ಲಿ ಕಂಪನಿಯು ಅಂತಹ ಯಾವುದೇ ಬದಲಾವಣೆ ತಂದಿಲ್ಲ. ಆದರೆ ಆಳವಾದ ಕಾನ್ಕೇವ್ ಗ್ರಿಲ್, ಎಲ್ಇಡಿ ಎಇಆರ್ರಲ್ಗಳೋಂದಿಗೆ ಲಂಡನ್ ಐ ಪ್ರಾಜೆಕ್ಟರ್ ಹೆಡ್ಲ್ಯಾಂಪ್ಗಳು, ಎಲ್ಇಡಿ ಟೈಲ್ ಲೈಟ್ಸ್, ವಿಂಡ್ಮಿಲ್ ಪ್ರೇರಿತ 17 ಇಂಚಿನ ಡೈಮಂಡ್ ಕಟ್ ಮಷಿನ್ ಅಲಾಯ್ ವೀಲ್ಸ್ ಸೇರಿದಂತೆ ವಿವಿಧ ಅತ್ಯಾಧುನಿಕ ಸಾಧನಗಳನ್ನ ಬಳಸಾಗಿದೆ.
ಈ ಹೆಚ್ಟಿ ಬ್ಯಾಟರಿಯ ಸಹಾಯದಿಂದ ಈ ಕಾರು 417 ಕಿಲೋಮೀಟರ್ವರೆಗೆ ಕ್ರಮಿಸಲಿದೆ ಎಂದು ಕಂಪನಿ ಹೇಳಿದೆ. ಎಂಜಿ ಮೋಟಾರ್ಸ್ ಈ ಬ್ಯಾಟರಿಗಳಿಗೆ 8 ವರ್ಷದ ಅಥವಾ 1.5 ಲಕ್ಷ ಕಿಲೋಮೀಟರ್ವರೆಗಿನ ಪ್ರಯಾಣಕ್ಕೆ ವ್ಯಾರಂಟಿಯನ್ನೂ ನೀಡಿದೆ. ದೇಶದ 31 ನಗರಗಳಲ್ಲಿ ಈ ಕಾರು ಲಭ್ಯವಿದೆ.