ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿಯೊಂದಿದೆ. ಇಂದೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಮಲ್ಟಿ ಕಮೋಡಿಟಿ ಏಕ್ಸ್ ಚೇಂಜ್ ನಲ್ಲಿ ಬೆಳ್ಳಿ ಮತ್ತು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 39 ರೂಪಾಯಿ ಇಳಿಕೆಯೊಂದಿಗೆ 10 ಗ್ರಾಂಗೆ 47,217.00 ರೂಪಾಯಿಗೆ ಇಳಿದಿದೆ. ಬೆಳ್ಳಿ ಬೆಲೆ 130 ರೂಪಾಯಿ ಇಳಿಕೆಯೊಂದಿಗೆ ಕೆ.ಜಿ.ಗೆ 68,608 ರೂಪಾಯಿಯಾಗಿದೆ.
ಬಜೆಟ್ ನಂತ್ರ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬರ್ತಿದೆ. ಆಗಸ್ಟ್ 2020ರಲ್ಲಿ 56,200 ಇದ್ದ ಚಿನ್ನದ ಬೆಲೆಯಲ್ಲಿ ಈಗ 9000 ರೂಪಾಯಿ ಇಳಿಕೆ ಕಂಡು ಬಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನದ ಬೆಲೆ 2.92 ಡಾಲರ್ ಇಳಿಕೆಯೊಂದಿಗೆ 1,811.22 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ 0.03 ಡಾಲರ್ ಏರಿಕೆಯೊಂದಿಗೆ 26.94 ಡಾಲರ್ ಪ್ರತಿ ಔನ್ಸ್ ವಹಿವಾಟು ನಡೆಸುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 46220 ರೂಪಾಯಿಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 50420 ರೂಪಾಯಿಯಾಗಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ 68700 ರೂಪಾಯಿಯಾಗಿದೆ. ಚಿನ್ನ ಮತ್ತು ಬೆಳ್ಳಿ ಆಮದು ಸುಂಕವನ್ನು ಶೇಕಡಾ 5ರಷ್ಟು ಕಡಿಮೆ ಮಾಡಲಾಗಿದೆ. ಪ್ರಸ್ತುತ ಚಿನ್ನ ಹಾಗೂ ಬೆಳ್ಳಿ ಮೇಲೆ ಶೇಕಡಾ 12.5ರಷ್ಟು ಸುಂಕ ವಿಧಿಸಲಾಗುತ್ತಿದೆ.