alex Certify ವಿಶಿಷ್ಟ ಸ್ಕೈಯಿಂಗ್​ ಉಡುಪಿನ ಮೂಲಕ ಈ ಜೋಡಿ ಫುಲ್ ಫೇಮಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ಸ್ಕೈಯಿಂಗ್​ ಉಡುಪಿನ ಮೂಲಕ ಈ ಜೋಡಿ ಫುಲ್ ಫೇಮಸ್..!

ನೀವೇನಾದರೂ ಸ್ಕೈಯಿಂಗ್​ ಪ್ರಿಯರಾಗಿದ್ದರೆ ಸ್ಕೈಯಿಂಗ್​ ಮಾಡೋ ವೇಳೆ ಯಾವ ರೀತಿಯ ಉಡುಗೆಯನ್ನ ಧರಿಸ್ತಾರೆ ಅನ್ನೋದರ ಬಗ್ಗೆಯೂ ನಿಮಗೆ ಮಾಹಿತಿ ಇರುತ್ತೆ.

ಬೂಟ್ಸ್, ಮೊಣಕಾಲು ರಕ್ಷಕ, ದಪ್ಪನೆಯ ಜಾಕೆಟ್​, ಬ್ಯಾಕ್​ಪ್ಯಾಕ್, ಕನ್ನಡಕ ಹಾಗೂ ಹೆಲ್ಮೆಟ್​​ನ್ನು ಸ್ಕೈಯಿಂಗ್​ ಪಟುಗಳು ಧರಿಸ್ತಾರೆ.

ಆದರೆ ಅಮೆರಿಕದ ಎನ್​ಆರ್​ಐ ದಂಪತಿ ತಮ್ಮ ವಿಶಿಷ್ಟ ಬಗೆಯ ಸ್ಕೈಯಿಂಗ್​ ಉಡುಪಿನ ಮೂಲಕವೇ ರಾತ್ರಿ ಬೆಳಗಾಗೋದ್ರಲ್ಲಿ ಸೋಶಿಯಲ್​ ಮೀಡಿಯಾದ ಫೇಮಸ್​ ಜೋಡಿಯಾಗಿ ಹೆಸರು ಮಾಡಿದ್ದಾರೆ.

ದಿವ್ಯಾ ಹಾಗೂ ಮಧು ಮಿನ್ನೆಸೋಟಾದ ಪ್ರಖ್ಯಾತ ಸ್ಥಳವೊಂದರಲ್ಲಿ ಸ್ಕೈಯಿಂಗ್​ ಮಾಡಲು ನಿರ್ಧರಿಸಿದ್ದಾರೆ. ಈ ಬಾರಿ ಅವರು ಸ್ಕೈಯಿಂಗ್​ ಮಾಡಲು ಎಲ್ಲರೂ ಧರಿಸುವಂತಹ ಧಿರಿಸನ್ನ ಧರಿಸಿರಲಿಲ್ಲ. ಬದಲಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆ ಹಾಗೂ ಧೋತಿಯನ್ನ ಧರಿಸಿದ್ರು.

ಸಾಂಪ್ರದಾಯಿಕ ಉಡುಗೆಯನ್ನ ಧರಿಸಿರುವ ದಿವ್ಯಾ ಹಾಗೂ ಮಧು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಫೇಮಸ್​ ಆಗಿದ್ದಾರೆ . ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿರುವ ದಿವ್ಯಾ ನಾವು ಕ್ರೇಜಿಯಾಗಿ ಏನಾದರೂ ಮಾಡೋಕೆ ಪ್ಲಾನ್​ ಮಾಡಿದ್ದೆವು ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

https://www.instagram.com/p/CKsUTw-n-FW/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...