ಬೆಂಗಳೂರು: ಮೀಸಲಾತಿಗೆ ಆಗ್ರಹಿಸಿ ಕುರುಬ ಸಮುದಾಯ ಆಯೋಜಿಸಿರುವ ಬೃಹತ್ ಸಮಾವೇಶಕ್ಕೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಗೈರಾಗಿರುವುದಕ್ಕೆ ಬಿಜೆಪಿ ಎಂ ಎಲ್ ಸಿ ಹೆಚ್.ವಿಶ್ವನಾಥ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ವಿಶ್ವನಾಥ್, ನಮ್ಮ ಸಮುದಾಯದ ಒಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದರೆ ಅವರು ಇಂದು ಸಮಾವೇಶಕ್ಕೆ ಬರಲೇ ಇಲ್ಲ. ಇದರಿಂದ ಕುರುಬ ಸಮುದಾಯಕ್ಕೆ ನೋವುಂಟಾಗಿದೆ. ಇದು ರಾಜಕೀಯ ಅಜೆಂಡಾ ಅಲ್ಲ. ಕೇವಲ ಸಮುದಾಯದ ಹೋರಾಟ ಎಂದು ಸಿದ್ದರಾಮಯ್ಯ ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಉತ್ತರಾಖಂಡದ ಜೊತೆ ಇಡೀ ದೇಶವೆ ಇದೆ ಎಂದ ಪ್ರಧಾನಿ: ದೇವಭೂಮಿ ರಕ್ಷಣೆಗೆ ಸಮರೋಪಾದಿಯಲ್ಲಿ ಸಹಕಾರ ಎಂದ ಗೃಹ ಸಚಿವ
ಕುರುಬರ ಹೋರಾಟ ಈ ಯುಗದ ಇತಿಹಾಸ. ಕಾಗಿನೆಲೆಯಿಂದ ಬೆಂಗಳೂರಿನವರೆಗೆ 21 ದಿನಗಳವರೆಗೆ ಪಾದಯಾತ್ರೆ ಮಾಡಿದ್ದೇವೆ. ನಮ್ಮ ಕೂಗನ್ನು ಕೇಂದ್ರ, ರಾಜ್ಯ ಸರ್ಕಾರಗಳು ಆಲಿಸಬೇಕು, ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.