10 ವರ್ಷದ ಬಾಲಕ ಹಾಗೂ ಆತನ ಕುಟುಂಬ ಸ್ನೇಹಿತ ಹಿಮಪಾತವಾದ ಸಂದರ್ಭದಲ್ಲಿ 80 ಆಸ್ಪತ್ರೆ ಸಿಬ್ಬಂದಿಯ ಕಾರುಗಳನ್ನ ಸ್ವಚ್ಛಗೊಳಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕ್ರಿಸ್ಟಿಯನ್ ಸ್ಟೋನ್ ಹಾಗೂ 29 ವರ್ಷದ ಅಬ್ಬೆ ಮೀಕರ್ ಆಸ್ಪತ್ರೆಯೊಂದರ ಪಾರ್ಕಿಂಗ್ ಏರಿಯಾಗೆ ತೆರಳಿ ಕಾರುಗಳನ್ನ ಸ್ವಚ್ಛ ಮಾಡುತ್ತಿದ್ದಾರೆ. ಆಸ್ಪತ್ರೆಯ ಕೆಲಸದಲ್ಲಿ ಸಿಬ್ಬಂದಿ ನಿರತರಾಗಿದ್ರೆ ಇಲ್ಲಿ ಇವರಿಬ್ಬರು ಈ ಸಾಮಾಜಿಕ ಕಾರ್ಯ ಮಾಡಿದ್ದಾರೆ.
ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ಗೆ ಯಾವುದಾದರೊಂದು ರೀತಿಯಲ್ಲಿ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಕ್ರಿಸ್ಟಿಯನ್ ಈ ಪ್ಲಾನ್ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಸ್ಪತ್ರೆ ಸಿಬ್ಬಂದಿ ಮನೆಗೆ ತೆರಳುವ ಸಮಯ ಬಂದಾಗ ಅವರಿಗೆ ಯಾವುದೇ ಅಡಚಣೆ ಉಂಟಾಗಬಾರದೆಂದು ಈ ಸೇವೆ ಮಾಡುತ್ತಿದ್ದಾರೆ.
ಈ ಕಾರಣಕ್ಕೆ ರೈಲಿನ ಎಸಿ ಕೋಚ್ ಕರ್ಟನ್ ತೆರವಿಗೆ ಮುಂದಾದ ಭಾರತೀಯ ರೈಲ್ವೆ ಇಲಾಖೆ
ದೀರ್ಘ ಕಾಲದ ಶಿಫ್ಟ್ ಮುಗಿಸಿ ಬಂದ ಬಳಿಕವೂ ಸ್ವಲ್ಪವೂ ಹಿಮದ ರಾಶಿಯಲ್ಲಿ ಆವೃತವಾಗದೇ ಸರಿಯಾಗಿ ಇರ್ತಿದ್ದ ಕಾರನ್ನ ನೋಡಿ ಆಸ್ಪತ್ರೆ ಸಿಬ್ಬಂದಿ ಮೊದಲು ಶಾಕ್ ಆಗಿದ್ದರು. ಬಳಿಕ ಇದು ಇವರಿಬ್ಬರ ಕಾರ್ಯ ಎಂಬ ವಿಚಾರ ತಿಳಿದು ಬಂದಿದೆ.