
ಬೆಳಗಾವಿ: ಮಸಾಜ್ ಪಾರ್ಲರ್ ನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೇದಾರಿ ಶಿಂಧೆ ಮತ್ತು ಪ್ರಕಾಶ ಬಂಧಿತ ಆರೋಪಿಗಳು ಎನ್ನಲಾಗಿದೆ.
ಇವರು ಮಸಾಜ್ ಸೆಂಟರ್ ನಲ್ಲಿ ಮಾಂಸ ದಂಧೆ ನಡೆಸುತ್ತಿದ್ದರು. ಮಸಾಜ್, ಸ್ಪಾ ಸೆಂಟರ್ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು. ಯುವತಿಯರಿಂದ ಮಸಾಜ್ ಮಾಡುವ ಬಗ್ಗೆ ಪ್ರಚಾರ ಮಾಡಿ ಆನ್ಲೈನ್ ಮುಖಾಂತರ ಶ್ರೀಮಂತ ಯುವಕರಿಗೆ ಗಾಳ ಹಾಕುತ್ತಿದ್ದರು.
ಡಿಸ್ಕೌಂಟ್ ಹೆಸರಲ್ಲಿ ದಂಧೆ ನಡೆಸಲಾಗುತ್ತಿತ್ತು. ಮಸಾಜ್ ಬಳಿಕ ಹೆಚ್ಚಿನ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದರು ಇವರನ್ನು ನಂಬಿಕೊಂಡು ಮಸಾಜ್ ಸೆಂಟರ್ ಗೆ ಹೋದವರ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿ ಹಣ ಪಡೆಯುತ್ತಿದ್ದರು. ಬೆಳಗಾವಿ ಸಿಇಎನ್ ಠಾಣೆ ಪೊಲೀಸರು ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.