ಧಾರವಾಡ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಧಾರವಾಡ ನೆಹರು ಯುವ ಕೇಂದ್ರವು ಜಿಲ್ಲೆಯ 8 ತಾಲೂಕುಗಳಲ್ಲಿ ತಾಲೂಕಿಗೆ ಇಬ್ಬರಂತೆ ಹಾಗೂ ಧಾರವಾಡದ ನೆಹರು ಯುವ ಕೇಂದ್ರ ಕಚೇರಿಗೆ ಇಬ್ಬರು ಕಂಪ್ಯೂಟರ್ ಕೆಲಸ ಮಾಡಲು ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ 1 ವರ್ಷದ ಅವಧಿಗೆ ತಾತ್ಕಾಲಿಕ ಕೆಲಸ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. 18 ವರ್ಷ ಪೂರ್ಣಗೊಂಡ ಹಾಗೂ 29 ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 5,000 ರೂ. ಗೌರವಧನ ನೀಡಲಾಗುವುದು. ಆರೋಗ್ಯ, ಸಾಕ್ಷರತೆ, ನೈರ್ಮಲ್ಯ, ಯುವಕ, ಯುವತಿ, ಮಹಿಳಾ ಮಂಡಳ ರಚನೆ, ಯುವ ಕಾರ್ಯಕ್ರಮಗಳು ಹಾಗೂ ಲಿಂಗ ಮತ್ತಿತರ ಸಾಮಾಜಿಕ ವಿಷಯಗಳ ಬಗ್ಗೆ ಪ್ರಚಾರ ಮಾಡುವ ಕೆಲಸವಿರುತ್ತದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು, ನೆಹರು ಯುವ ಕೇಂದ್ರ, ಮಿನಿ ವಿಧಾನ ಸೌಧ ಕಟ್ಟಡ ಧಾರವಾಡ ಅಥವಾ ನೆಹರು ಯುವ ಕೇಂದ್ರ ಸಂಘಟನೆಯ ಆನ್‍ಲೈನ್ ವೆಬ್‍ಸೈಟ್ www.nyks.nic.in ನಿಂದ ಪಡೆದು ಫೆ.20 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2971379 ಅಥವಾ ಮೊಬೈಲ್ ಸಂಖ್ಯೆ 9848666536 ಕ್ಕೆ ಸಂಪರ್ಕಿಬಹುದು ಎಂದು ಜಿಲ್ಲಾ ಯುವ ಸಮನ್ವಯ ಅಧಿಕಾರಿ ತಿಳಿಸಿದ್ದಾರೆ.