alex Certify ಕೋವಿಡ್ ವಿಚಾರದಲ್ಲಿ ಭಾರತದ ಸಾಧನೆಯನ್ನ ಕೊಂಡಾಡಿದ ವಿಶ್ವ ಆರೋಗ್ಯ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ವಿಚಾರದಲ್ಲಿ ಭಾರತದ ಸಾಧನೆಯನ್ನ ಕೊಂಡಾಡಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್​ ವಿರುದ್ಧ ಲಸಿಕೆಯ ಹೋರಾಟ ಮುಂದುವರಿಸಿರುವ ಭಾರತ ತನ್ನ ದೇಶದ ಪ್ರಜೆಗಳಿಗೆ ಲಸಿಕೆಗಳನ್ನ ನೀಡೋದ್ರ ಜೊತೆ ಜೊತೆಗೆ ಅನ್ಯ ದೇಶಗಳಿಗೂ ಲಸಿಕೆಗಳನ್ನ ಒದಗಿಸಿ ಮಾನವೀಯತೆ ಮೆರೆಯುತ್ತಿದೆ. ವಿಶ್ವಆರೋಗ್ಯ ಸಂಸ್ಥೆ ಈ ವಿಚಾರವಾಗಿ ಭಾರತದ ಮಾನವೀಯ ಮೌಲ್ಯವನ್ನ ಈ ಹಿಂದೆಯೇ ಹಾಡಿ ಹೊಗಳಿತ್ತು. ಇದೀಗ ಮತ್ತೊಂದು ವಿಚಾರದಲ್ಲಿ ಭಾರತದ ಸಾಧನೆಯನ್ನ ವಿಶ್ವ ಮಟ್ಟದಲ್ಲಿ ಕೊಂಡಾಡಿದೆ.

ಕೊರೊನಾ ಮಧ್ಯೆಯೂ ಮಿಂಚುತ್ತಿರುವ ರಣವೀರ್ ಸಿಂಗ್: ಗಳಿಕೆ ಕೇಳಿದ್ರೆ ತಿರುಗುತ್ತೆ ತಲೆ

ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ. ಟೆಡ್ರೋಸ್​ ಎಡ್​ನಾಂ ಘೋಬಿಯಸ್​ ಈ ವಿಚಾರವಾಗಿ ಮಾತನಾಡಿ, ಕೊರೊನಾ ವೈರಸ್​ ನಿಯಂತ್ರಣದ ವಿಚಾರದಲ್ಲಿ ಭಾರತ ಅತ್ಯುತ್ತಮ ಅಭಿವೃದ್ಧಿಯನ್ನ ಪ್ರದರ್ಶಿಸಿದೆ. ಭಾರತವನ್ನೇ ಉದಾಹರಣೆಯಾಗಿ ತೆಗೆದುಕೊಂಡ್ರೆ ಲಸಿಕೆಯನ್ನ ಬಳಕೆಯ ಜೊತೆಗೆ ಸೂಕ್ತ ಕ್ರಮಗಳ ಮೂಲಕ ನಾವು ಈ ವೈರಸ್​ನ್ನ ನಿಯಂತ್ರಿಸಬಹುದಾಗಿದೆ ಎಂಬ ವಿಚಾರ ಸಾಬೀತಾಗುತ್ತೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನ ವಿಶ್ವ ಆರೋಗ್ಯ ಸಂಸ್ಥೆ ನಿರೀಕ್ಷಿಸಲಿದೆ ಎಂದು ಹೇಳಿದ್ರು.

— Global Health Strategies (@GHS) February 5, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...