alex Certify ಏಷ್ಯಾದ ಅತಿದೊಡ್ಡ ಸರೋವರ ಉತ್ಸವಕ್ಕೆ ಉತ್ತರಾಖಂಡ್​ ಸಜ್ಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಷ್ಯಾದ ಅತಿದೊಡ್ಡ ಸರೋವರ ಉತ್ಸವಕ್ಕೆ ಉತ್ತರಾಖಂಡ್​ ಸಜ್ಜು

ಫೆಬ್ರವರಿ 16 ಹಾಗೂ 17ನೇ ತಾರೀಖಿನಂದು ಉತ್ತರಾಖಂಡ್​ ಪುರಾಣ ಪ್ರಸಿದ್ಧ ತೆಹ್ರಿ ಸರೋವರ ಉತ್ಸವವನ್ನ ನಡೆಸಲು ಸಕಲ ಸಿದ್ಧತೆಯನ್ನ ಮಾಡಿಕೊಳ್ತಿದೆ. ಇದು ಏಷ್ಯಾದ ಅತಿದೊಡ್ಡ ಸರೋವರ ಉತ್ಸವವಾಗಿದ್ದು ಪ್ರವಾಸಿಗರನ್ನ ಬರ ಮಾಡಿಕೊಳ್ಳಲು ಉತ್ತರಾಖಂಡ್​​ ಪ್ರವಾಸಿ ಇಲಾಖೆ ಸಜ್ಜಾಗಿದೆ.

ಪ್ರತಿ ವರ್ಷ ಈ ಸಮಯಕ್ಕೆ ಸರಿಯಾಗಿ ಉತ್ತರಾಖಂಡ್​​ನಲ್ಲಿ ಸರೋವರ ಉತ್ಸವವನ್ನ ಆಚರಿಸಲಾಗುತ್ತೆ. ಈ ಉತ್ಸವದಲ್ಲಿ ಭಾಗಿಯಾಗಲು ಇಚ್ಚಿಸುವವರು ಮುಂಚಿತವಾಗಿ ಸೀಟನ್ನು ಕಾಯ್ದಿರಿಸಬೇಕಾಗುತ್ತೆ. ಈ ಸರೋವರವನ್ನ ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವತ್ತ ಉತ್ತರಾಖಂಡ್​ ರಾಜ್ಯ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ.

ವೈಮಾನಿಕ ಕ್ರೀಡೆ, ಬೆಂಕಿಯ ಸಾಹಸ ಸೇರಿದಂತೆ ವಿವಿಧ ಸಾಹಸ ಚಟುವಟಿಕೆಗಳು ಹಾಗೂ ಜಲ ಕ್ರೀಡೆ ತೆಹ್ರಿ ಸರೋವರ ಉತ್ಸವದ ಹೈಲೈಟ್​ ಆಗಿದೆ. ಇದು ಮಾತ್ರವಲ್ಲದೇ ಸಂಗೀತ ಪ್ರದರ್ಶನ, ಸಾಂಸ್ಕೃತಿಕ ನೃತ್ಯ, ಯೋಗ ಪ್ರದರ್ಶನ, ಆಭರಣ ಪ್ರದರ್ಶನ ಹೀಗೆ ಸಾಕಷ್ಟು ಮಳಿಗೆಗಳು ನಿಮ್ಮನ್ನ ಕೈ ಬೀಸಿ ಕರೆಯಲಿವೆ.

ನೀವು ವಿಮಾನ ಮಾರ್ಗದಲ್ಲಿ ಈ ಸ್ಥಳಕ್ಕೆ ಬರಲಿಚ್ಚಿಸಿದ್ದಲ್ಲಿ ಡೆಹ್ರಾಡೂನ್​ ಜಾಲಿ ಗ್ರಾಂಟ್​ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬಹುದಾಗಿದೆ. ಇಲ್ಲಿಂದ ನೀವು ಟ್ಯಾಕ್ಸಿ ಮೂಲಕ ಉತ್ಸವದ ಸ್ಥಳವನ್ನ ತಲುಪಬಹುದಾಗಿದೆ.

ರೈಲು ಮಾರ್ಗದಲ್ಲಿ ಬರುವವರು, ಹೃಷಿಕೇಶ ರೈಲು ನಿಲ್ದಾಣದಲ್ಲಿ ಇಳಿದುಕೊಂಡು ಅಲ್ಲಿಂದ 73 ಕಿಲೋ ಮೀಟರ್​ ದೂರದಲ್ಲಿರುವ ತೆಹ್ರಿಗೆ ಬಸ್ಸು ಇಲ್ಲವೇ ಟ್ಯಾಕ್ಸಿ ಮೂಲಕ ತೆರಳಬಹುದಾಗಿದೆ.

ಇನ್ನು ರಸ್ತೆ ಮಾರ್ಗ ನಿಮ್ಮ ಆಯ್ಕೆಯಾಗಿದ್ದಾರೆ ಮುಸ್ಸೂರಿ, ಹೃಷಿಕೇಶ, ಹರಿದ್ವಾರ, ಶ್ರೀನಗರ, ದೆಹಲಿ ಹೀಗೆ ಇನ್ನೂ ಹಲವು ನಗರಗಳಲ್ಲಿ ಇಳಿದುಕೊಂಡು ಅಲ್ಲಿಂದ ಬಸ್ಸಿನಲ್ಲಿ ಉತ್ಸವದ ಸ್ಥಳವನ್ನ ತಲುಪಬಹುದಾಗಿದೆ.

— Uttarakhand Tourism (@UTDBofficial) January 28, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...