ಭೋಪಾಲ್ನ ವಿವಿಧೆಡೆ ನಡೆಸಲಾದ ಶೋಧ ಕಾರ್ಯದಲ್ಲಿ ಬರೋಬ್ಬರಿ 20 ಲಕ್ಷ ರೂಪಾಯಿ ಮೌಲ್ಯದ 1 ಲಕ್ಷಕ್ಕೂ ಹೆಚ್ಚು ಅಕ್ರಮ ವಿದೇಶಿ ಬ್ರ್ಯಾಂಡ್ಗಳ ಸಿಗರೇಟ್ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಮಾಹಿತಿ ನೀಡಿದೆ.
ನಿರ್ದಿಷ್ಟ ಮಾಹಿತಿ ಆಧರಿಸಿದ ಡಿಆರ್ಐ ಭೋಪಾಲ್ನ ವಿವಿಧೆಡೆ ಶೋಧ ಕಾರ್ಯ ನಡೆದಿದೆ. ದಾಳಿ ವೇಳೆ ಡಿಜಾರಂ ಬ್ಲಾಕ್, ಎಸ್ಸೆ, ಮೊಂಡ್ ಹಾಗೂ ಗುಂಡಾಂಗ್ ಗರಂನಂತಹ ವಿವಿಧ ಬ್ರ್ಯಾಂಡ್ಗಳ ಒಟ್ಟು 1 ಲಕ್ಷಕ್ಕೂ ಹೆಚ್ಚು ವಿದೇಶಿ ಸಿಗರೇಟ್ ಪ್ಯಾಕ್ಗಳನ್ನ ವಶಪಡಿಸಿಕೊಳ್ಳಲಾಗಿದೆ.
ಈ ಸಿಗರೇಟುಗಳನ್ನ ಅಕ್ರಮವಾಗಿ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಹಾಗೂ ಈ ಸಿಗರೇಟ್ ಪ್ಯಾಕೇಟ್ಗಳ ಮೇಲೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಆದೇಶದಂತೆ ಕ್ಯಾನ್ಸರ್ ಜಾಗೃತಿ ಚಿತ್ರಗಳು ನಮೂದಾಗಿಲ್ಲ ಎಂದು ಡಿಆರ್ಐ ಮಾಹಿತಿ ನೀಡಿದೆ.