ವಜ್ರದ ಆಭರಣ ಅಂದ್ರೆ ಬಹುತೇಕ ಮಹಿಳೆಯರಿಗೆ ಅಚ್ಚುಮೆಚ್ಚು. ಕೆಲವು ಪುರುಷರು ಕೂಡ ವಜ್ರದ ಹರಳನ್ನ ಇಷ್ಟಪಡ್ತಾರೆ. ವಜ್ರವನ್ನ ಕಿವಿಯೋಲೆಯಾಗಿ, ಸರವಾಗಿ, ಉಂಗುರ, ಬಳೆ ಹೀಗೆ ವಿವಿಧ ಆಭರಣಗಳ ರೂಪದಲ್ಲಿ ಧರಿಸಬಹುದಾಗಿದೆ.
ಅಮೆರಿಕದ ರ್ಯಾಪರ್ ಲಿಲ್ ಉಜಿ ವರ್ಟ್ಗೆ ವಜ್ರದ ಮೇಲಿನ ಮೋಹ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಅವರು ಗುಲಾಬಿ ಬಣ್ಣದ ವಜ್ರವನ್ನ ತಮ್ಮ ಹಣೆಯ ಮೇಲೆ ಅಳವಡಿಸಿಕೊಂಡಿದ್ದಾರೆ.
ಲಿಲ್ ಉಜಿ ವರ್ಟ್ ಎಂಬ ಹೆಸರಿನಿಂದಲೇ ಫೇಮಸ್ ಆಗಿರುವ 26 ವರ್ಷದ ರಾಪರ್ ಸಿಮೆರೆ ಬಿಸಿಲ್ವುಡ್ಸ್ ತಾನು ಹೇಗೆ ಹಣೆಗೆ ವಜ್ರ ಚುಚ್ಚಿಸಿಕೊಂಡೆ ಅನ್ನೋದನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಲವರು ಇದನ್ನ ಇಷ್ಟಪಟ್ಟಿದ್ರೆ ಇನ್ನು ಕೆಲವರು ಇದೆಂತಾ ವೇಷ ಎಂದು ವ್ಯಂಗ್ಯವಾಡಿದ್ದಾರೆ.
https://www.instagram.com/p/CK1m6lsprQy/?utm_source=ig_web_copy_link