alex Certify ಈ ದೇಶದಲ್ಲಿ ಶೀಘ್ರದಲ್ಲೇ ಲಭ್ಯವಿದೆ ಕೊರೊನಾ ವೈರಸ್​ ಡಿಜಿಟಲ್​ ಪಾಸ್​ಪೋರ್ಟ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶದಲ್ಲಿ ಶೀಘ್ರದಲ್ಲೇ ಲಭ್ಯವಿದೆ ಕೊರೊನಾ ವೈರಸ್​ ಡಿಜಿಟಲ್​ ಪಾಸ್​ಪೋರ್ಟ್..​..!

ಡೆನ್ಮಾರ್ಕ್​ ತನ್ನ ದೇಶದಲ್ಲಿ ಶೀಘ್ರದಲ್ಲೇ ಕೊರೊನಾ ವೈರಸ್​ ಪಾಸ್​ಪೋರ್ಟ್​ನ್ನು ಜಾರಿಗೆ ತರೋದಾಗಿ ಹೇಳಿದೆ.

ತನ್ನ ದೇಶದ ಪ್ರಜೆಗಳಿಗೆ ಇತರೆ ದೇಶಕ್ಕೆ ಪ್ರಯಾಣ ಬೆಳೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಡೆನ್ಮಾರ್ಕ್​ ಸರ್ಕಾರ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಯುರೋಪಿಯನ್​ ರಾಷ್ಟ್ರಗಳಲ್ಲಿ ಲಾಕ್​ಡೌನ್​ ಅವಧಿ ನಡೆಯುತ್ತಿದ್ದು ತುರ್ತು ಸೇವೆಗಳಲ್ಲದ ವಿಭಾಗಗಳಾದ ಬಾರ್​, ರೆಸ್ಟೋರೆಂಟ್​ಗಳಿಗೆ ಜನರ ಪ್ರವೇಶವನ್ನ ನಿರ್ಬಂಧಿಸಲಾಗಿದೆ. ಆದರೆ ಪಾರ್ಸೆಲ್​ ಆದೇಶಗಳನ್ನ ಸ್ವೀಕರಿಸಲು ಅನುಮತಿ ನೀಡಲಾಗಿದೆ.

ಇನ್ನು ಕೊರೊನಾ ವೈರಸ್​ ಪಾಸ್​ಪೋರ್ಟ್ ಬಗ್ಗೆ ಮಾತನಾಡಿದ ಡೆನ್ಮಾರ್ಕ್​ ಹಣಕಾಸು ಸಚಿವ ಮಾರ್ಟನ್​ ಬೋಡ್ಸ್ಕೋವ್​​ ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಈ ಪಾಸ್​ಪೋರ್ಟ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎಂದು ಹೇಳಿದ್ರು.

ಖುಷಿ ಸುದ್ದಿ….! ವಾಹನ ಸ್ಕ್ರ್ಯಾಪ್ ಮಾಡಿದ್ರೆ ಸಿಗುತ್ತೆ ಡಬಲ್ ಸಬ್ಸಿಡಿ

ನೀವು ಕೋವಿಡ್​ 19 ವಿರುದ್ಧ ಲಸಿಕೆ ಪಡೆದಿದ್ದೀರಿ ಎಂಬುದನ್ನ ಸಾಬೀತು ಪಡಿಸಲು ಈ ಕೊರೊನಾ ವೈರಸ್​ ಪಾಸ್​ಪೋರ್ಟ್​ ಬಳಕೆಯಾಗುತ್ತದೆ. ಈ ಪಾಸ್​ಪೋರ್ಟ್​ನಲ್ಲಿ ವ್ಯಕ್ತಿಯು ಕೊರೊನಾ ನೆಗೆಟಿವ್​ ವರದಿ ಹೊಂದಿದ್ದಾನೆ ಎಂಬ ವಿವರಗಳನ್ನೂ ನಮೂದಿಸಬಹುದಾಗಿದೆ. ಈ ಡಿಜಿಟಲ್​ ಪಾಸ್​ಪೋರ್ಟ್​ನ್ನು ಪ್ರಪಚದಾದ್ಯಂತ ಬಳಕೆ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...