alex Certify ಟೆಕ್ಕಿ ಪತಿಯ ಕಿರುಕುಳ: ಪತ್ನಿ ದುರಂತ ಅಂತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಕ್ಕಿ ಪತಿಯ ಕಿರುಕುಳ: ಪತ್ನಿ ದುರಂತ ಅಂತ್ಯ

Image result for hang

ಬೆಂಗಳೂರು: ಟೆಕ್ಕಿ ಪತಿ ಮಹಾಶಯನ ಕಿರುಕುಳ ತಾಳಲಾರದೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.

ಪದ್ಮಾವತಿ (38) ಮೃತ ಪತ್ನಿ. ಟೆಕ್ಕಿ ಭಾಸ್ಕರ್ ಆರೋಪಿ ಪತಿ. ಜನವರಿ 28ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಪತಿ ಭಾಸ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ವೇಶ್ಯಾವಾಟಿಕೆ ಹೆಸರಲ್ಲಿ ಹನಿಟ್ರ್ಯಾಪ್ ಮಾಡ್ತಿದ್ದ ದಂಪತಿ ಅರೆಸ್ಟ್

15 ವರ್ಷಗಳ ಹಿಂದೆ ಭಾಸ್ಕರ್ ಹಾಗೂ ಪದ್ಮಾವತಿ ವಿವಾಹವಾಗಿದ್ದರು. ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಭಾಸ್ಕರ್ ದುಶ್ಚಟಗಳ ದಾಸನಾಗಿದ್ದ. ಪ್ರತಿದಿನ ಕುಡಿತ, ಮೋಜು-ಮಸ್ತಿ, ಪಾರ್ಟಿ, ಪರಸ್ತ್ರೀಯರ ಸಹವಾಸದಲ್ಲೇ ಕಾಲ ಕಳೆಯುತ್ತಿದ್ದ. ಮನೆಗೆ ಬಂದು ದಿನನಿತ್ಯ ಹೆಂಡತಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಪತ್ನಿ ಈ ಹಿಂದೆ 3 ಬಾರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದೀಗ ನಾಲ್ಕನೇ ಬಾರಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...