ದೆಹಲಿ ಸರ್ಕಾರ ವಾಹನ ಸ್ಕ್ರಾಪ್ ಗೆ ಸಂಬಂಧಿಸಿದಂತೆ ಸಬ್ಸಿಡಿ ಯೋಜನೆ ಜಾರಿಗೆ ತಂದಿದೆ. ವಾಹನ ಸ್ಕ್ಯಾಪ್ ಮಾಡುವ ಮೊದಲು ದೆಹಲಿ ಜನರು ಈ ಯೋಜನೆ ಬಗ್ಗೆ ತಿಳಿದಿರುವುದು ಒಳ್ಳೆಯದು. ಡಬಲ್ ಸಬ್ಸಿಡಿ ಯೋಜನೆಯಡಿ ಸ್ಕ್ಯಾಪ್ ಹಣದ ಜೊತೆ ಸಬ್ಸಿಡಿ ಸಿಗುತ್ತದೆ. ಮನೆಯಲ್ಲೇ ಕುಳಿತು ವೆಬ್ಸೈಟ್ ಸಹಾಯದಿಂದ ಸಬ್ಸಿಡಿ ಪಡೆಯಬಹುದು. ಆದ್ರೆ ಇದ್ರ ಲಾಭ ಪಡೆಯಲು ಒಂದು ಕೆಲಸ ಮಾಡಬೇಕಾಗುತ್ತದೆ.
ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿದ್ರೆ ಮಾತ್ರ ಈ ಯೋಜನೆ ಲಾಭ ಸಿಗಲಿದೆ. ದೆಹಲಿ ಸರ್ಕಾರ 100ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮಾಡೆಲ್ ಗೆ ಅನುಮೋದನೆ ನೀಡಿದೆ ಎಂದು ಸಚಿವ ಕೈಲಾಶ್ ಗೆಹ್ಲೋಟ್ ಹೇಳಿದ್ದಾರೆ. ಈಗಾಗಲೇ 36 ತಯಾರಕರು ಎಲೆಕ್ಟ್ರಿಕ್ ವಾಹನ ಪಾಲಿಸಿ ಅಡಿ ಹೆಸರು ನೋಂದಾಯಿಸಿದ್ದಾರೆ.
ದೆಹಲಿ ಸರ್ಕಾರ ಅನುಮೋದನೆ ನೀಡಿದ 100 ಮಾದರಿಗಳಲ್ಲಿ 14 ದ್ವಿಚಕ್ರ ವಾಹನ, 45 ಇ-ರಿಕ್ಷಾ ಮತ್ತು 12 ನಾಲ್ಕು ಚಕ್ರದ ವಾಹನಗಳಾಗಿವೆ. ಎರಡು ರೀತಿಯ ಸಬ್ಸಿಡಿ ಪಡೆಯಲು ದೆಹಲಿ ಸರ್ಕಾರ ವೆಬ್ಸೈಟ್ ಸಿದ್ಧಪಡಿಸಿದೆ. ಇದಕ್ಕೆ ev.delhi.gov.in ಎಂದು ಹೆಸರಿಟ್ಟಿದೆ. ವಾಹನವನ್ನು ಸ್ಕ್ರ್ಯಾಪ್ ಗೆ ಹಾಕಿ ಹೊಸ ಎಲೆಕ್ಟ್ರಾನಿಕ್ ವಾಹನವನ್ನು ಖರೀದಿಸಿದ ನಂತ್ರ ಈ ವೆಬ್ಸೈಟ್ ನಲ್ಲಿ ಮಾಹಿತಿ ನೀಡಿ ಸಬ್ಸಿಡಿ ಲಾಭ ಪಡೆಯಬೇಕು.