ಬಾಗಲಕೋಟೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಮುಖಂಡನ ಮನೆಗೆ ಭೇಟಿ ಬೆನ್ನಲ್ಲೇ ಬಿಜೆಪಿ ನಾಯಕ ಸಂತೋಷ್ ಹೊಕ್ರಾಣಿಯವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಿ ಆದೇಶ ನೀಡಲಾಗಿದೆ. ಪಕ್ಷದ ಈ ನಡೆಯಿಂದ ಶಾಕ್ ಆಗಿರುವ ಸಂತೋಷ್ ಹೊಕ್ರಾಣಿ, ಪಕ್ಷಕ್ಕಾಗಿ 18 ವರ್ಷಗಳ ಕಾಲ ಕೆಲಸ ಮಾಡಿದ್ದಕ್ಕಾಗಿ ದೊಡ್ಡ ಬಹುಮಾನವನ್ನೇ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷಕ್ಕೆ ಮುಜುಗರವಾಗುವಂತೆ ನಾನು ನಡೆದುಕೊಂಡಿಲ್ಲ, ಪಕ್ಷ ವಿರೋಧಿ ಚಟುವಟಿಕೆಯನ್ನೂ ಮಾಡಿಲ್ಲ. ಆದರೆ ಕುಮಾರಸ್ವಾಮಿ ನಮ್ಮ ಮನೆಗೆ ಭೇಟಿ ನೀಡಿದರೆಂದು ಪಕ್ಷದಿಂದಲೇ ನನ್ನನ್ನು ಉಚ್ಛಾಟಿಸುವ ಕ್ರಮ ಸರಿಯಲ್ಲ ಎಂದಿದ್ದಾರೆ.
ಶೌಚಾಲಯವೂ ಇಲ್ಲ, ಡ್ಯೂಟಿ ಅವಧಿಯೂ ಹೆಚ್ಚು; ಸಾರಿಗೆ ಸಚಿವರಿಗೆ ತಮ್ಮ ಸಂಕಷ್ಟ ತಿಳಿಸಿದರು ಮಹಿಳಾ ಕಂಡಕ್ಟರ್
ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಅಸಮಾಧಾನ ಹೊರಹಾಕಿರುವ ಸಂತೋಷ್, ನಿಮಗಾಗಿ ಕೆಲಸ ಮಾಡಿದವರಿಗೆ ನೀವು ಕೊಡುವ ಬಹುಮಾನ ಇದೆಯೇ? ಕುಮಾರಸ್ವಾಮಿ ನಮ್ಮ ಮನೆಗೆ ಬಂದದ್ದು ಪಕ್ಷ ವಿರೋಧಿ ಚಟುವಟಿಕೆಯಾ? ಬೇರೆ ಪಕ್ಷದವರು ನಿಮ್ಮ ಮನೆಗೆ ಬರುವುದಿಲ್ಲವೇ? ಅಥವಾ ನೀವು ಹೋಗುವುದಿಲ್ಲವೇ? ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.