ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಕಡಿತ ಮಾಡಿದ ನಂತರದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆಯಾಗಿದೆ.
ಕಳೆದ ನಾಲ್ಕು ದಿನದ ಅವಧಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂಗೆ 2500 ರೂ.ನಷ್ಟು ಇಳಿಕೆಯಾಗಿದೆ. ಬಜೆಟ್ನಲ್ಲಿ ಆಮದು ಸುಂಕವನ್ನು ಶೇಕಡ 12.5 ಇದರಿಂದ ಶೇಕಡ 7.5 ರಷ್ಟು ಕಡಿತಗೊಳಿಸಲಾಗಿದೆ. ಇದಾದ ನಂತರದಲ್ಲಿ ಚಿನ್ನದ ದರ ಭಾರೀ ಕಡಿಮೆಯಾಗತೊಡಗಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ದರ 10 ಗ್ರಾಂಗೆ 44,350 ರೂ. ಇದ್ದು, 24 ಕ್ಯಾರೆಟ್ ಚಿನ್ನದ ದರ 48,380 ರೂ. ಇದೆ.