alex Certify BPL ಕಾರ್ಡ್ ದಾರರು ಸೇರಿ ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BPL ಕಾರ್ಡ್ ದಾರರು ಸೇರಿ ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್

ಬಳ್ಳಾರಿ: ಹರಪನಹಳ್ಳಿ ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಫೆಬ್ರವರಿ ತಿಂಗಳಿನ ಪಡಿತರ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದ್ದು, ವಿತರಣೆಗೆ ಆದೇಶಿಸಲಾಗಿದೆ ಎಂದು ಹರಪನಳ್ಳಿ ತಹಶೀಲ್ದಾರರು ತಿಳಿಸಿದ್ದಾರೆ.

ಫೆ. 9 ರಿಂದ ಅಂತ್ಯೋದಯ(ಎಎವೈ) ಪಡಿತರ ಚೀಟಿಗೆ 35 ಕೆ.ಜಿ.ಅಕ್ಕಿ, ಆದ್ಯತಾ (ಪಿ.ಹೆಚ್.ಹೆಚ್/ಬಿ.ಪಿ.ಎಲ್) ಪಡಿತರ ಚೀಟಿಗಳಿಗೆ 5 ಕೆ.ಜಿ ಅಕ್ಕಿ, 2 ಕೆ.ಜಿ. ಗೋಧಿ, ಎಪಿಎಲ್(ಎನ್.ಪಿ.ಹೆಚ್.ಹೆಚ್.) ಒಪ್ಪಿಗೆ ಪಡೆದ ಏಕ ಸದಸ್ಯ ಪಡಿತರ ಚೀಟಿಗೆ ಕೆಜಿಗೆ ರೂ. 15 ರಂತೆ 5 ಕೆ.ಜಿ. ಅಕ್ಕಿ ಹಾಗೂ ಇಬ್ಬರು ಅಥವಾ ಹೆಚ್ಚಿನ ಸದಸ್ಯರು ಹೊಂದಿದ ಪಡಿತರ ಚೀಟಿದಾರರಿಗೆ 10 ಕೆಜಿಯಂತೆ ಆಹಾರ ಧಾನ್ಯ ಪಡೆಯಲು ತಿಳಿಸಿದ್ದಾರೆ.

ಫೆ.9 ರಿಂದ ತಿಂಗಳ ಅಂತ್ಯದವರೆಗೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಬಯೋ/ಆಧಾರ್ ದೃಢೀಕರಣ ಓಟಿಪಿ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಂಡು ಪಡಿತರ ಆಹಾರಧಾನ್ಯ ಪಡೆದುಕೊಳ್ಳಬಹುದಾಗಿದೆ.

ಇ-ಕೆವೈಸಿ ದೃಢೀಕರಣ:

ತಾಲೂಕಿನ ಅಂತ್ಯೋದಯ(ಎಎವೈ) ಮತ್ತು ಪಿಎಚ್‍ಎಚ್(ಬಿಪಿಎಲ್) ಪಡಿತರ ಚೀಟಿದಾರರುಗಳು ಫೆ.8 ರವರೆಗೆ ಇ-ಕೆವೈಸಿ ಕಾರ್ಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಇ-ಕೆವೈಸಿ ಆಗದ ಸದಸ್ಯರುಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಬಯೋ ನೀಡಿ ಒಂದು ಬಾರಿ ಇ-ಕೆವೈಸಿ ದೃಢೀಕರಣ ಮಾಡಿಸಿಕೊಳ್ಳಬಹುದು; ಈ ಕಾರ್ಯಕ್ಕೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...