![Image result for alert-samsung-stops-security-updates-for-samsung-galaxy-a-series](https://hindi.cdn.zeenews.com/hindi/sites/default/files/2021/02/04/755292-sam-jhat.jpg)
ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್ ಬಳಕೆದಾರರು ಈ ಸುದ್ದಿ ಓದ್ಲೇಬೇಕು. ಸ್ಮಾರ್ಟ್ಫೋನ್ ಸುರಕ್ಷತೆ ನವೀಕರಣದಲ್ಲಿ ಸ್ಯಾಮ್ಸಂಗ್ ಬದಲಾವಣೆ ಮಾಡಿದೆ. ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಇನ್ಮುಂದೆ ಸೆಕ್ಯೂರಿಟಿ ಅಪ್ಡೇಟ್ ಸಿಗುವುದಿಲ್ಲ.
ಮಾಹಿತಿ ಪ್ರಕಾರ, ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಎ ಸರಣಿಯ ಸೆಕ್ಯೂರಿಟಿ ಅಪ್ಡೇಟ್ ನಿಲ್ಲಿಸಲು ನಿರ್ಧರಿಸಿದೆ. 2017 ಕ್ಕಿಂತ ಮೊದಲ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್ ಹೊಂದಿದ್ದರೆ, ಅದರ ಆಪರೇಟಿಂಗ್ ಸಿಸ್ಟಂನಲ್ಲಿ ಸಮಸ್ಯೆ ಬರಬಹುದು. ಮಾಹಿತಿಯ ಪ್ರಕಾರ, ಗ್ಯಾಲಕ್ಸಿ ಜೆ3 ಪಾಪ್, ಗ್ಯಾಲಕ್ಸಿ ಎ5- 2017, ಗ್ಯಾಲಕ್ಸಿ ಎ3 2017 ಮತ್ತು ಗ್ಯಾಲಕ್ಸಿ ಎ7 2017 ಸ್ಮಾರ್ಟ್ಫೋನ್ ಗಳು ಇನ್ಮುಂದೆ ಸೆಕ್ಯೂರಿಟಿ ಅಪ್ಡೇಟ್ ಹೊಂದಿರುವುದಿಲ್ಲವೆಂದು ಸ್ಯಾಮ್‌ಸಂಗ್ ಘೋಷಿಸಿದೆ.
ವರದಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ8, ಗ್ಯಾಲಕ್ಸಿ ಎ02 ಮತ್ತು ಗ್ಯಾಲಕ್ಸಿ ಎಂ12 ಗೆ ಪ್ರತಿ ತಿಂಗಳು ಆಗ್ತಿದ್ದ ನವೀಕರಣಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಗ್ಯಾಲಕ್ಸಿ ಎಸ್ 21, ಎಸ್ 21 + ಮತ್ತು ಎಸ್ 21 + ಅಲ್ಟ್ರಾಗಳಿಗೆ ಪ್ರತಿ ತಿಂಗಳು ಸೆಕ್ಯೂಟಿರಿ ಅಪ್ಡೇಟ್ ಒದಗಿಸಲು ಕಂಪನಿ ನಿರ್ಧರಿಸಿದೆ.
ಸ್ಮಾರ್ಟ್‌ಫೋನ್ ನಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಮೊಬೈಲ್ ತಯಾರಕರ ಕಂಪನಿಗಳು ಸಾಫ್ಟ್ ವೇರ್ ನವೀಕರಿಸುತ್ತಿರುತ್ತವೆ. ಸೆಕ್ಯೂರಿಟಿ ಅಪ್ಡೇಟ್ ಇಲ್ಲವೆಂದ್ರೆ ಸ್ಮಾರ್ಟ್‌ಫೋನ್‌ಗಳ ವೇಗ ಕಡಿಮೆಯಾಗಲು ಪ್ರಾರಂಭವಾಗುತ್ತದೆ.