ನೀರು ಮತ್ತು ಹಣ ಜೀವನಕ್ಕೆ ಅತ್ಯಗತ್ಯ. ನೀರಿನಿಂದ ಹಣ ಸಂಪಾದನೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಬಾಟಲಿ ನೀರಿಗೆ ಬೇಡಿಕೆ ಹೆಚ್ಚಾಗಿದೆ.
ಶುದ್ಧ ಕುಡಿಯುವ ನೀರನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಇದೇ ಕಾರಣಕ್ಕೆ ಬಾಟಲಿ ನೀರಿನ ವ್ಯಾಪಾರವು ವಾರ್ಷಿಕವಾಗಿ ಶೇಕಡಾ 20ರಷ್ಟು ಬೆಳೆಯುತ್ತಿದೆ. ಇದೇ ಕಾರಣಕ್ಕೆ ಪ್ರಸಿದ್ಧ ಕಂಪನಿಗಳು ಬಾಟಲಿ ನೀರಿನ ವ್ಯಾಪಾರಕ್ಕೆ ಇಳಿಯುತ್ತಿವೆ. ಮಾರುಕಟ್ಟೆಯಲ್ಲಿ 1 ರೂಪಾಯಿ ಪೌಚ್ ನಿಂದ ಹಿಡಿದು 20 ರೂಪಾಯಿವರೆಗಿನ ಬಾಟಲಿ ಲಭ್ಯವಿದೆ. ನೀವು ನೀರಿನ ಬಾಟಲಿ ವ್ಯಾಪಾರ ಶುರು ಮಾಡಿ ಲಾಭ ಗಳಿಸಬಹುದು.
ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕುಗಳು ಇದಕ್ಕೆ ಸಾಲ ನೀಡುತ್ತವೆ. ಬ್ಯಾಂಕಿನಿಂದ 10 ಲಕ್ಷ ರೂಪಾಯಿ ಸಾಲ ಪಡೆದು ಈ ವ್ಯವಹಾರ ಶುರು ಮಾಡಬಹುದು. ಮುದ್ರಾ ಸಾಲವನ್ನು ಸರ್ಕಾರ ನೀಡುತ್ತದೆ. ಗುಣಮಟ್ಟ ಉತ್ತಮವಾಗಿದ್ದರೆ ಬಾಟಲಿ ನೀರಿನ ವ್ಯಾಪಾರ ಉತ್ತಮವಾಗಿರುತ್ತದೆ. ಪ್ರತಿ ತಿಂಗಳು 1,12,500 ರೂಪಾಯಿ ವಹಿವಾಟು ನಡೆಸಬಹುದು. ಅದ್ರಲ್ಲಿ ಎಲ್ಲ ಕಳೆದು 20 ರಿಂದ 25 ಸಾವಿರ ಲಾಭ ಪಡೆಯಬಹುದು.
ದೊಡ್ಡ ಕಂಪನಿಗಳು ನೀರಿನ ಬಾಟಲಿಗಳನ್ನು ಸರಬರಾಜು ಮಾಡ್ತಿವೆ. ಕಂಪನಿಗಳಿಂದ ನೀರಿನ ಬಾಟಲಿ ಪಡೆದು ವ್ಯಾಪಾರ ಶುರು ಮಾಡಬಹುದು. ಐದರಿಂದ 10 ಲಕ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಬೇಸಿಗೆ ಹತ್ತಿರ ಬರ್ತಿದ್ದು, ಆ ಸಮಯದಲ್ಲಿ ನೀರಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಹಾಗಾಗಿ ಬೇಸಿಗೆ ವೇಳೆ ನಿಮ್ಮ ವ್ಯಾಪಾರ ಶುರು ಮಾಡಿದ್ರೆ ಒಳ್ಳೆಯದು.