alex Certify ಮುಖ, ಕೈ ಕಸಿ ನಂತ್ರ ನಗುವುದನ್ನು ಕಲಿತ ಯುವಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖ, ಕೈ ಕಸಿ ನಂತ್ರ ನಗುವುದನ್ನು ಕಲಿತ ಯುವಕ….!

ಮುಖ ಕಸಿ ಹಾಗೂ ಕೈ ಕಸಿ ಮಾಡಿಸಿಕೊಂಡ ಆರು ತಿಂಗಳ ನಂತ್ರ ಜೋ ಡಿಮಿಯೊ ಮತ್ತೆ ಕಿರುನಗೆ ಬೀರಿದ್ದಾರೆ. ಕಣ್ಣು ಮಿಟುಕಿಸುವುದು, ಸೀನುವುದು, ಚಿಟಕಿ ಹೊಡೆಯುವುದನ್ನು ಕಲಿತಿದ್ದಾನೆ. ಯುಎಸ್ ನಿವಾಸಿ 22 ವರ್ಷದ ಜೋ ಡಿಮಿಯೊಗೆ ಆಗಸ್ಟ್ 2020ರಲ್ಲಿ ಸವಾಲಿನ ಆಪರೇಷನ್ ನಡೆದಿತ್ತು.

ಅಪಘಾತವೊಂದರಲ್ಲಿ ಜೊ ಡಿಮಿಯೊ ಮುಖ ಸುಟ್ಟು ಹೋಗಿತ್ತು. ಎನ್ವೈಯು ಲ್ಯಾಂಗನ್ ಹೆಲ್ತ್ ನಲ್ಲಿ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಇದಕ್ಕೆ ಸ್ವಲ್ಪ ಸಮಯ ಕಾಯುವುದು ಅಗತ್ಯವಾಗಿತ್ತು. ಯುನೈಟೆಡ್ ನೆಟ್‌ವರ್ಕ್ ಫಾರ್ ಆರ್ಗನ್ ಶೇರಿಂಗ್  ಪ್ರಕಾರ ವಿಶ್ವದಾದ್ಯಂತ ಶಸ್ತ್ರಚಿಕಿತ್ಸಕರು ಕನಿಷ್ಠ 18 ಮುಖ ಕಸಿ ಮತ್ತು 35 ಕೈ ಕಸಿ ಮಾಡಿದ್ದಾರೆ. ಆದರೆ ಏಕಕಾಲದಲ್ಲಿ ಮುಖ ಮತ್ತು ಎರಡೂ ಕೈಗಳ ಕಸಿ ಸಾಕಷ್ಟು ವಿರಳ. ಇದಕ್ಕಿಂತ ಮೊದಲು ಎರಡು ಬಾರಿ ಈ ರೀತಿ ಕಸಿ ನಡೆದಿದೆ.

2009ರಲ್ಲಿ ಪ್ಯಾರಿಸ್ ನಲ್ಲಿ ಮೊದಲ ಬಾರಿ ಈ ರೀತಿ ಶಸ್ತ್ರಚಿಕಿತ್ಸೆ ನಡೆದಿತ್ತು. ಆದ್ರೆ ಶಸ್ತ್ರಚಿಕಿತ್ಸೆಯಾದ ಒಂದು ತಿಂಗಳ ನಂತ್ರ ರೋಗಿ ಸಾವನ್ನಪ್ಪಿದ್ದ. 2011ರಲ್ಲಿ ಬೋಸ್ಟನ್ ವೈದ್ಯರು ಮಹಿಳೆಗೆ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಿದ್ದರು. ಆದ್ರೆ ಕೆಲ ದಿನಗಳ ನಂತ್ರ ಮಹಿಳೆ ಕಸಿ ಕೈ ವಾಪಸ್ ತೆಗೆಯಲಾಯ್ತು. ಜೊ ಡಿಮಿಯೊ ಈಗ ಹೊಸ ಮುಖ ಹಾಗೂ ಕೈಗಳನ್ನು ಹೇಗೆ ಬಳಸುವುದು ಎನ್ನುವ ಬಗ್ಗೆ ತರಬೇತಿ ಪಡೆಯುತ್ತಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...